ಸಿದ್ದಾಪುರ: ಶ್ರೀ ಬೊಮ್ಮೇಶ್ವರ ಯಕ್ಷಗಾನ ಕಲಾಕೇಂದ್ರ ಹೊಸೂರು ಇವರಿಂದ ಯಕ್ಷತರಂಗಿಣಿ ಹಾರ್ಸಿಕಟ್ಟ ಇವರ ಸಹಯೋಗದಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ತರಬೇತಿ ಪಡೆದ ಮಕ್ಕಳ ರಂಗ ಪ್ರವೇಶವು ಮಾ.2ರಂದು ಶನಿವಾರ ಸಂಜೆ 7 ಗಂಟೆಗೆ ಹೊಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಕಲಾ ಕೇಂದ್ರದ ಲೋಕೇಶ್ ಅಪ್ಪಿನಬೈಲ್ ಹಾಗೂ ಯಕ್ಷತರಂಗಿಣಿ ಸಂಸ್ಥೆಯ ನಂದನ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಣ್ಣ ಟಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶ್ರೇಯಸ್ ಆಸ್ಪತ್ರೆಯ ಡಾ. ಕೆ ಶ್ರೀಧರ್ ವೈದ್ಯ ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಕೆ.ಜಿ. ನಾಗರಾಜ್, ಮಾರುತಿ ಟಿ. ನಾಯ್ಕ, ಆನಂದ್ ಐ ನಾಯ್ಕ, ವಿನಾಯಕ ಹೆಗಡೆ ಕಲಗದ್ದೆ, ಪಿ.ಬಿ.ಹೊಸೂರು, ವಿಜಯ ಹೆಗಡೆ, ಮಂಜುನಾಥ್ ನಾಯ್ಕ, ಆರ್.ಐ ನಾಯ್ಕ, ರಘುಪತಿ ನಾಯ್ಕ, ಎಮ್.ಆರ್. ನಾಯ್ಕ, ಜೈಕುಮಾರ್ ನಾಯ್ಕ, ಯಶೋದಾ ಮಡಿವಾಳ, ಮಂಜುಳಾ ನಾಯ್ಕ, ವಿಜೇಂದ್ರ ಗೌಡರ್ ಇವರ ಉಪಸ್ಥಿತಿ ಇರಲಿದ್ದು, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನಂದನ್ ನಾಯ್ಕ ಇವರ ನಿರ್ದೇಶನದಲ್ಲಿ ಸಂಸ್ಥೆಯ ಮಕ್ಕಳಿಂದ ಜಾಂಬವತಿ ಕಲ್ಯಾಣ ಹಾಗೂ ಯಕ್ಷತರಂಗಿಣಿ ಹಾಗೂ ಅತಿಥಿ ಕಲಾವಿದರಿಂದ ‘ಮಹಿಷಾಸುರ ವಧೆ’ ಯಕ್ಷಗಾನ ನಡೆಯಲಿರುವ ಬಗ್ಗೆ ಅವರು ತಿಳಿಸಿದ್ದಾರೆ.