Slide
Slide
Slide
previous arrow
next arrow

ಕದಂಬೋತ್ಸವದಲ್ಲಿ ಕುಸ್ತಿ ಅಖಾಡಕ್ಕೆ ಸಿದ್ದತೆ: ಜಿಲ್ಲಾಧಿಕಾರಿ ಮಾಹಿತಿ

300x250 AD

ಕಾರವಾರ: ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದ ಅಂಗವಾಗಿ ನಡೆಯುವ ವಿವಿಧ ಸ್ಪರ್ದೆಗಳಲ್ಲಿ, ಕುಸ್ತಿ ಸ್ಪರ್ದೆಗೆ ಅಖಾಡ ಸಿದ್ದಗೊಳಿಸುವ ಕಾರ್ಯ ಆರಂಭಗೊ0ಡಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಈ ಬಾರಿಯ ಕದಂಬೋತ್ಸವದ ಕ್ರೀಡೆಗಳನ್ನು ಇದೇ ಮೊದಲ ಬಾರಿಗೆ ಕದಂಬ ಮೈದಾನದಲ್ಲಿ ಆಯೋಜಿಸಲಾಗುತ್ತಿದ್ದು, ಇದಕ್ಕಾಗಿ ಕುಸ್ತಿ ಅಖಾಡ ನಿರ್ಮಾಣ ಕುರಿತಂತೆ ಹಳಿಯಾಳದಿಂದ ಆಗಮಿಸಿದ್ದ ತಜ್ಞರು ಅಖಾಡ ನಿರ್ಮಿಸುವ ಕುರಿತಂತೆ ನೀಡಿರುವ ಸಲಹೆಯಂತೆ ಅಖಾಡ ನಿರ್ಮಾಣ ಕಾರ್ಯ ನಡೆಯಲಿದ್ದು, ಮಹಿಳೆ ಮತ್ತು ಪುರುಷರ ವಿಭಾಗದ ಹಗ್ಗ ಜಗ್ಗಾಟ ಸೇರಿದಂತೆ ಎಲ್ಲಾ ಕ್ರೀಢೆಗಳನ್ನು ನಡೆಸಲು ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಕ್ರೀಡೆಯಲ್ಲಿ ಭಾಗವಹಿಸಲು ಆಗಮಿಸುವ ಕ್ರೀಡಾಪಟುಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಕ್ರೀಡೆಗಳಲ್ಲಿ ಭಾಗವಹಿಸುವವರಿಗೆ ಮುನ್ನೆಚ್ಚರಿಕೆಯಾಗಿ ತುರ್ತು ವ್ಯೆದ್ಯಕೀಯ ಚಿಕಿತ್ಸೆಗೆ ಅನುಕೂಲವಾಗುವಂತೆ ಆಂಬುಲೆನ್ಸ್ ಸಹಿತ ವೈದ್ಯರ ನಿಯೋಜನೆ ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುವುದು ಎಂದರು. ಕದಂಬೋತ್ಸವದ ಪ್ರಮುಖ ಆಕರ್ಷಣೆಯಾದ ವೇದಿಕೆ ಬಳಿ ಗ್ರಿನ್ ರೂಮ್ ನಿರ್ಮಾಣ ಮತ್ತು ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top