Slide
Slide
Slide
previous arrow
next arrow

ಫೆ.25ಕ್ಕೆ ತಾರೇಹಳ್ಳಿ-ಕಾನಸೂರು ವಿವಿಧೋದ್ದೇಶ ಸಹಕಾರ ಸಂಘದ ಸುವರ್ಣಮಹೋತ್ಸವ

300x250 AD

ಸಿದ್ದಾಪುರ: ತಾಲೂಕಿನ ತಾರೇಹಳ್ಳಿ ಕಾನಸೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಕಾನಸೂರು ಇದರ ಸುವರ್ಣಮಹೋತ್ಸವ ಸಮಾರಂಭ ಫೆ.25ರಂದು ಸಂಘದ ದಿ.ಸುಬ್ರಾಯ ಹೆಗಡೆ ಮುತ್ಮುರ್ಡು ವೇದಿಕೆಯಲ್ಲಿ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ ಗಣಪತಿ ಜೋಶಿ ಈರಗೊಪ್ಪ ಹೇಳಿದರು.

ಸಂಘದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1970ರಲ್ಲಿ ಮುತ್ಮುರ್ಡು ಸುಬ್ರಾಯ ಹೆಗಡೆ ನೇತೃತ್ವದಲ್ಲಿ ಕಾನಸೂರು ಭಾಗದ ಹಿರಿಯರು 12ಗ್ರಾಮಗಳಿಗೆ ಒಳಪಟ್ಟು ಕಾನಸೂರಿನಲ್ಲಿ ಆರ್ಥಿಕ ಸಂಸ್ಥೆಯನ್ನು ಸ್ಥಾಪಿಸಿದರು.  ಸಂಘದ ಪ್ರಥಮ ಅಧ್ಯಕ್ಷರಾಗಿ ಕೆ.ಆರ್.ಹೆಗಡೆ ದೇವಿಸರ ಕಾರ್ಯನಿರ್ವಹಿಸಿದರು. ಅಂದಿನಿಂದ ಇಂದಿನವರೆಗೂ ಸಂಘ ಸುತ್ತಮುತ್ತಲಿನ ಜನರ ಅನುಕೂಲಕ್ಕೋಸ್ಕರ ಆರ್ಥಿಕ ಶೋಷಣೆ ಆಗಬಾರದೆಂದು  ಮತ್ತು ಸ್ವಾವಲಂಬಿಳಾಗಬೇಕೆಂಬ ಘನ ಉದ್ದೇಶದಿಂದ ಸಹಕಾರ ಸಂಸ್ಥೆ ಸ್ಥಾಪನೆಗೊಂಡು ಸದಸ್ಯರ ಜೀವನಾಡಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

300x250 AD

ಫೆ.25ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸುವರ್ಣ ಮಹೋತ್ಸವ ಉದ್ಘಾಟಿಸುವರು. ಶಾಸಕ ಭೀಮಣ್ಣ ಟಿ.ನಾಯ್ಕ ಸುವರ್ಣ ಸಹಕಾರ ಸ್ಮರಣ ಸಂಚಿಕೆ  ಲೋಕಾರ್ಪಣೆ ಮಾಡುವರು. ಸಂಘದ ಅಧ್ಯಕ್ಷ ಮಂಜುನಾಥ ಗಣಪತಿ ಜೋಶಿ ಈರಗೊಪ್ಪ ಅಧ್ಯಕ್ಷತೆವಹಿಸುವರು. ಸಂಸದ ಅನಂತಕುಮಾರ ಹೆಗಡೆ, ಶಾಸಕ ಶಿವರಾಮ ಹೆಬ್ಬಾರ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ,ಜಿಲ್ಲಾ ಸಹಕಾರ ಉಪನಿಬಂಧಕ ಮಂಜುನಾಥ ಸಿಂಗ್ ಉಪಸ್ಥಿತರಿರುತ್ತಾರೆ.
ಇದೇ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಸದಸ್ಯರುಗಳನ್ನು ಸನ್ಮಾನಿಸಲಾಗುತ್ತದೆ.
ಮಧ್ಯಾಹ್ನ 2.30ರಿಂದ ಅಡಕೆ ತೋಟದಲ್ಲಿ ಉಪ ಬೆಳೆಗಳು ಮತ್ತು ಸುಧಾರಿತ ನಿರ್ವಹಣಾ ವಿಧಾನಗಳು ಸಂವಾದ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಗತಿಪರ ಕೃಷಿಕರಾದ ಗೋಪಾಲ ಹೆಗಡೆ ಹುಳಗೋಳ, ಸೀತಾರಾಮ ಹೆಗಡೆ ನೀರ್ನಳ್ಳಿ ಹಾಗೂ ರಾಮಚಂದ್ರ ಹೆಗಡೆ ಗಡಿಕೈ ಪಾಲ್ಗೊಳ್ಳಲಿಲದ್ದಾರೆ. ನಂತರ ಸಹಕಾರ ಸಂಘಗಳಲ್ಲಿ ಸದಸ್ಯರ ಪಾತ್ರ ಹಾಗೂ ತೆರಿಗೆ ಕಾನೂನುಗಳ ಅರಿವು ಕುರಿತು ಶಿರಸಿಯ ಚಾರ್ಟರ್ಡ್ ಅಕೌಂಟಂಟ್ ಮಂಜುನಾಥ ಶೆಟ್ಟಿ ಮಾಹಿತಿ ನೀಡಲಿದ್ದಾರೆ.
ಸಂಜೆ 5ಕ್ಕೆ ಸಂಘದ ಅಧ್ಯಕ್ಷ ಮಂಜುನಾಥ ಗಣಪತಿ ಜೋಷಿ ಈರಗೊಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಲಿದೆ. ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ, ಟಿಎಸ್‌ಎಸ್ ಅಧ್ಯಕ್ಷ  ಗೋಪಾಲಕೃಷ್ಣ ವೈದ್ಯ,  ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ, ಶಿರಸಿಯ ಕದಂಬ ಮಾರ್ಕೇಟಿಂಗ್ ನ ಅಧ್ಯಕ್ಷ ಶಂಭುಲಿಂಗ ಹೆಗಡೆ, ಕೆಡಿಸಿಸಿ ಬ್ಯಾಂಕ ವ್ಯವಸ್ಥಾಪಕ ನಿರ್ದೇಶಕ ಆರ್.ಜಿ.ಭಾಗ್ವತ್, ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ  ಉಪಸ್ಥಿತರಿರುತ್ತಾರೆ. ಇದೇ ಸಂದರ್ಭದಲ್ಲಿ ಸಂಘದಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರನ್ನು, ನಿವೃತ್ತ ಮುಖ್ಯ ಕಾರ್ಯನಿರ್ವಾಹಕರನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಗುತ್ತದೆ.
ನಂತರ ರವಿ  ಮೂರೂರು ತಂಡದವರಿಂದ ಸಂಗೀತ ಕಾರ್ಯಕ್ರಮ ಹಾಗೂ ಕೊಂಡದಕುಳಿ ರಾಮಚಂದ್ರ ಹೆಗಡೆ ಬಳಗದವರಿಂದ  ದಕ್ಷಯಜ್ಞ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಉಪಾಧ್ಯಕ್ಷ ರಾಮಚಂದ್ರ ಎಂ.ಹೆಗಡೆ ಕಲ್ಕಟ್ಟೆ, ಸದಸ್ಯರಾದ ಗುರುನಾಥ ಜಿ.ಹೆಗಡೆ ದೇವಿಸರ, ಮಂಜುನಾಥ ಡಿ.ಭಟ್ಟ  ಕಲ್ಕಟ್ಟೆ, ಹರಿನಾರಾಯಣ ಜಿ.ಭಟ್ಟ ಜಿಗಳೇಮನೆ. ಶ್ರೀಪಾದ ವಿ.ಹೆಗಡೆ ಮಾದನಕಳ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಎನ್.ಹೆಗಡೆ ಕಲ್ಕಟ್ಟೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top