Slide
Slide
Slide
previous arrow
next arrow

ಶಾಸ್ತ್ರೀಯ ಕಲಾ ಸಂಘಟನೆ ಶ್ಲಾಘನೀಯ: ಅಪರ್ಣಾ ರಮೇಶ್

300x250 AD

ಶಿರಸಿ: ಸಂಸ್ಕಾರಯುತವಾದ ಶಾಸ್ತ್ರೀಯ ಕಲೆ ಸಂಘಟಿಸುವುದು ಹಾಗೂ ಮಕ್ಕಳಿಗೆ ಅದನ್ನು ಮಾರ್ಗದರ್ಶಿಸುವ ಕೆಲಸ ನಿಜಕ್ಕೂ ಶ್ಲಾಘನೀಯವಾಗಿದ್ದು ಇದು ನಿರಂತರವಾಗಿರಲಿ ಎಂದು ಶಿರಸಿ ಸಹಾಯಕ ಆಯುಕ್ತರಾದ ಅಪರ್ಣಾ ರಮೇಶ ಹೇಳಿದರು.

ನಗರದ ಟಿ.ಎಂ. ಎಸ್. ಸಭಾ ಭವನದಲ್ಲಿ ಇಲ್ಲಿಯ ಜನನಿ ಮ್ಯುಸಿಕ್ ಸಂಸ್ಥೆ ಸಂಘಟಿಸಿದ್ದ ಯುವಧ್ವನಿ ವಿಶೇಷ ಸಂಗೀತ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಎಲ್ಲಾ ಕಲಾ ಪ್ರಾಕಾರಗಳಿಗೆ ಶಾಸ್ತ್ರೀಯ ಸಂಗೀತ ಮೂಲವಾಗಿದ್ದು ಇದರ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅಭ್ಯಾಗತರಾಗಿದ್ದ ಶಿರಸಿ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಅಧ್ಯಕ್ಷ ಎಂ.ಎಲ್. ಹೆಗಡೆ ಹಲಸಿಗೆ  ಮಾತನಾಡಿ ನಿರಂತರವಾಗಿ 20 ವರ್ಷಗಳಿಂದ  ಶಾಸ್ತ್ರೀಯ ಕಲೆ ಸಂಘಟನೆ ಮಾಡುವುದು ಸುಲಭವಾದ  ಕೆಲಸವಲ್ಲ. ತನ್ಮೂಲಕ ನೂರಾರು ವಿದ್ಯಾರ್ಥಿಗಳಿಗೆ  ಮಾರ್ಗದರ್ಶನ ಮಾಡುತ್ತ ವೇದಿಕೆಯಲ್ಲಿ ಅವರ ಪ್ರತಿಭೆ ಹೊರ ಹೊಮ್ಮಿಸುವಂತೆ ಮಾಡುತ್ತಿರುವ ಜನನಿ ಸಂಸ್ಥೆ ಕಾರ್ಯವನ್ನು ಶ್ಲಾಘಿಸಿದ್ದಲ್ಲದೆ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದರು.

ಶಿರಸಿ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ ಮಾತನಾಡಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಮಾತನಾಡಿ  ಋಷಿ ಮುನಿಗಳ ಹಾಗೂ ರಾಜರ ಆಳ್ವಿಕೆಯಿಂದಲೂ ಸಂಗೀತ ಹಾಗೂ ನಾಟ್ಯಗಳಿಗೆ ಮಹತ್ವವಿದ್ದು. ಇದು ಒಬ್ಬ ವ್ಯಕ್ತಿ ತಮ್ಮ ಜೀವಿತ ಅವಧಿಯಲ್ಲಿ ಸಂಪೂರ್ಣವಾಗಿ ಅಧ್ಯಯನ ಮಾಡಲಾಗದಷ್ಟು ಆಳವಾಗಿದೆ. ಮನಸಿನ ಏಕಾಗ್ರತೆ ಜೀವನ ಸಾಧನೆಗೆ  ಸಂಗೀತ ಅತ್ಯಂತ ಪ್ರಾಮುಖ್ಯವಾಗಿದ್ದು, ಮಕ್ಕಳು ಕಲಿಯುವಾಗ ಆಸಕ್ತಿ, ಶ್ರದ್ಧೆ, ಪರಿಶ್ರಮ ಎಲ್ಲವನ್ನೂ ಮೈಗೂಡಿಸಿಕೊಂಡು ಅಭ್ಯಸಿಸಿದಾಗ ಯಶಸ್ಸು ಕಂಡಿತ ಸಾಧ್ಯ ಎಂದರು.
ಯುವಧ್ವನಿ ವಿಶೇಷ ಸಸಂಗೀತ ಕಾರ್ಯಕ್ರಮದಲ್ಲಿ ಪೂರ್ವ ಯೋಜಿತವಾಗಿ ಆಯೋಜಿಸಲಾಗಿದ್ದ ಯುವಧ್ವನಿಗಾಗಿ ಉದ್ಯೋತನ ಪುರಸ್ಕಾರವನ್ನು ಯುವ ಗಾಯಕಿಯರಾದ ಮಧುಶ್ರೀ ಶೇಟ್, ಮಹಿಮಾ ಗಾಯತ್ರಿ,  ಸ್ನೇಹಾ ಅಮ್ಮಿನಳ್ಳಿ, ಮಾನಸ ಹೆಗಡೆ ಹಾಗೂ ಸಂಪದಾ ಎಸ್. ಇವರಿಗೆ ಪ್ರಧಾನ ಮಾಡಲಾಯಿತು.

ಇದೆ ಸಂದರ್ಭದಲ್ಲಿ ಜನನಿ ಸಂಸ್ಥೆಯ ಪಾಲಕರಿಗೆ ಮಮತೆಯ ಸನ್ಮಾನವನ್ನು ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಗಣೇಶ ಕೂರ್ಸೆ ಮತ್ತು ಶಾಂತಾ ದಂಪತಿಗಳಿಗೆ ನೆರವೇರಿಸಲಾಯಿತು. ವೇದಿಕೆಯಲ್ಲಿ ರೇಖಾ ದಿನೇಶ ಉಪಸ್ಥಿತರಿದ್ದರು. ಸಂಸ್ಥೆಯ ಧ್ಯೇಯೋದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಜನನಿ ಅಧ್ಯಕ್ಷ ದಿನೇಶ ಹೆಗಡೆ ಸ್ವಾಗತಿಸಿದರು.  ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿದರೆ ವರದಿಗಾರ ಕೃಷ್ಣಮೂರ್ತಿ ಕೆರೆಗದ್ದೆ ವಂದಿಸಿದರು.

300x250 AD

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಸಂಸ್ಥೆಯ ಹಿರಿಯ ಕಿರಿಯ ಕಲಾವಿದರುಗಳಿಂದ ಗಾಯನ ಕಾರ್ಯಕ್ರಮ ನಡೆಯಿತು. ಸಂಪದಾ ಎಸ್., ಭೂಮಿ ದಿನೇಶ ತಮ್ಮ ಗಾಯನವನ್ನು ನಡೆಸಿಕೊಟ್ಟರು. ಪ್ರಥಮ ದಿನದ ಕೊನೆಯ ಕಾರ್ಯಕ್ರಮವಾಗಿ ವಿದೂಷಿ ರೇಖಾ ದಿನೇಶ ಅವರು ತಮ್ಮ ಸಂಗೀತ ಕಚೇರಿ ನಡೆಸಿಕೊಡುತ್ತಾ ರಾಗ್ ಜೋಗ್ ಕಂಸನಲ್ಲಿ ವಿಸ್ತಾರವಾಗಿ ಹಾಡಿ ಖಿರವಾಣಿ, ತರಾನಾ ಪ್ರಸ್ತುತಗೊಳಿಸಿದರು. ನಂತರ ಭಾವಗೀತೆ ಹಾಗೂ ರಾಗ್ ಭೈರವಿಯಲ್ಲಿ ಸಂಗೀತ ಶಾರದೆ ಕುರಿತಾಗಿ ಭಕ್ತಿ ಹಾಡನ್ನು ಹಾಡಿ ಕಾರ್ಯಕ್ರಮ ಸಮಾಪ್ತಿಗೊಳಿಸಿದರು. ಭೂಮಿ ದಿನೇಶ ರಾಗ್‌ಜೋಗ್‌ನಲ್ಲಿ ವಿಲಂಬಿತ ಏಕತಾಳ ಜಿಯರಾಮಾನತ್‌ನಹಿ ದೃತ್‌ನಲ್ಲಿ ತುಮಹೊನಾತ ತುಮಹೋ ಸಾಹಿ ದೃತ ಬಂದಿಶ ಮತ್ತು ತರಾನದೊಂದಿಗೆ ಪ್ರಸ್ತುತ ಪಡಿಸಿದರು. ಸುಪ್ರಸಿದ್ಧ ಮರಾಠಿ ಭಜನ ಮಿ ರಾಧಿಕಾ ಇದನ್ನು ಅತ್ಯಂತ ಮನೋಜ್ಞವಾಗಿ ಸಾದರಪಡಿಸಿದರು.  ಗಾನಕ್ಕೆ ಹಾರ್ಮೊನಿಯಂನಲ್ಲಿ ಸತೀಶ ಭಟ್ ಹೆಗ್ಗಾರ ಹಾಗೂ ತಬಲಾದಲ್ಲಿ ಡಾ. ಶ್ರೀ ಹರಿ ದಿಗ್ಗವಿ ಸಹಕರಿಸಿದರೆ ರೇಖಾ ದಿನೇಶರವರ ಗಾನಕ್ಕೆ ತಬಲಾದಲ್ಲಿ ಗಣೇಶ ಗುಂಡ್ಕಲ್  ಹಾಗೂ ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ವರ್ಗಾಸರ ಹಿನ್ನಲೆಯ ತಾನಪುರದಲ್ಲಿ ಸ್ನೇಹಾ ಹಾಗೂ ಮಧುಶ್ರೀ ರಿದಮ್ ಪ್ಯಾಡನಲ್ಲಿ ಕಿರಣ ಹೆಗಡೆ ಕಾನಗೋಡ ತಾಳದಲ್ಲಿ ಅನಂತಮೂರ್ತಿ ಸಾಥ್ ನೀಡಿದರು.

Share This
300x250 AD
300x250 AD
300x250 AD
Back to top