ಹೊನ್ನಾವರ: ದೇಶಕ್ಕಾಗಿ ಹೋರಾಡಿ ಹುತಾತ್ಮರಾದವರನ್ನು ಮರೆಯಬಾರದು. ಅವರು ತೋರಿದ ದಾರಿಯಲ್ಲಿ ಮುಂದಿನ ಪೀಳಿಗೆಯನ್ನು ನಡೆಸುವುದು ಶಿಕ್ಷಕರ ಹಾಗೂ ಶಾಲೆಯ ಕರ್ತವ್ಯ ಎಂದು ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್& ಪಿ. ಯು. ಕಾಲೇಜ್‌ನಲ್ಲಿ ನಡೆದ ಹುತಾತ್ಮರ ದಿನಾಚರಣೆನ್ನುದ್ದೇಶಿಸಿ ಪರಮಪೂಜ್ಯ ಶ್ರೀ ಶ್ರೀಶ್ರೀ ಮಾರುತಿಗುರೂಜಿಯವರು ಮಾತನಾಡಿದರು.
ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್& ಪಿ. ಯು. ಕಾಲೇಜ್‌ನಲ್ಲಿ ಜನವರಿ 30, ಮಂಗಳವಾರ ಹುತಾತ್ಮರ ದಿನಾಚರಣೆ ಹಾಗೂ ವಿಜ್ಞಾನ ದಿನದ ಅಂಗವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರದ ಧರ್ಮಾಧಿಕಾರಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀಶ್ರೀ ಮಾರುತಿ ಗುರೂಜಿಯವರು ವಹಿಸಿದ್ದರು. ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಈ ಸಮಾರಂಭಕ್ಕೆ, ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನರ್ಪಿಸುವ ಮೂಲಕ ಚಾಲನೆ ನೀಡಲಾಯಿತು. ಒಂದು ನಿಮಿಷ ಮೌನಾಚರಣೆಯ ಮೂಲಕ ಹುತಾತ್ಮರುಗಳ ಆತ್ಮಕ್ಕೆ ಶಾಂತಿ ಕೋರಲಾಯಿತು. ನಂತರದಲ್ಲಿ ವಿಜ್ಞಾನದಿನದ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನುಆಯೋಜಿಸಲಾಗಿತ್ತು. ಶ್ರೀ ಶ್ರೀಶ್ರೀ ಮಾರುತಿಗುರೂಜಿಯವರು ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ, ಅತಿಥಿಗಳು ಹಾಗೂ ಪಾಲಕರೊಂದಿಗೆ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವೈಜ್ಞಾನಿಕ ವಸ್ತುಗಳ ಮಾದರಿಗಳನ್ನು ವೀಕ್ಷಿಸಿ, ಅವಶ್ಯಕ ಮಾಹಿತಿಯನ್ನು, ಮಾರ್ಗದರ್ಶನವನ್ನು ನೀಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. 60 ಕ್ಕೂ ಹೆಚ್ಚಿನ ಮಾದರಿಗಳನ್ನು ವಿದ್ಯಾರ್ಥಿಗಳು ಸಿದ್ದಪಡಿಸಿದ್ದು ನೋಡಿದವರೆಲ್ಲರ ಪ್ರಶಂಸೆಗೆ ಪಾತ್ರರಾದರು.
ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಅರ್ಪಿತಾ ಮಾರುತಿ ಗುರೂಜಿ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಮಂಜುನಾಥ ಎಮ್. ಎನ್., ಶಾಲೆಯ ಆಡಳಿತ ನಿರ್ದೇಶಕರಾದ ಡಾ|| ಜಿ. ಟಿ. ಹೆಗಡೆ, ಪಾಲಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ವಿನಾಯಕ ನಾಯ್ಕ, ಪಾಲಕ-ಶಿಕ್ಷಕ ಸಂಘದ ಕಾರ್ಯದರ್ಶಿಗಳಾದ ವಿಷ್ಣುಮೂರ್ತಿ ಹೆಗಡೆ, ಶಾಲೆಯ ಪ್ರಾಂಶುಪಾಲರಾದ ಎಸ್.ಜೊನ್ ಬೊಸ್ಕೊ ಹಾಗೂ ಶಿಕ್ಷಕವೃಂದ, ಸಿಬ್ಬಂದಿವರ್ಗ, ಪಾಲಕವೃಂದ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.