ಹೊನ್ನಾವರ : ತಾಲೂಕಿನ ಸಾಲಿಕೇರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಕೋಲಾ ಬಳಲೆ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ಚಾಲಕ ಗೋಪಾಲ ಸೋಮಯ್ಯ ಹಳ್ಳೆರ ಸಾಲಿಕೇರಿ ಶ್ರೀಕುಮಾರ ಪೆಟ್ರೋಲ್ ಬಂಕ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರ ಮೇಲೆ ನಿಂತಿದ್ದ ಇಕೋ ಕಾರ್’ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಆಟೋದಲ್ಲಿದ್ದ ಸಂತೋಷ್ ಸೋಮಯ್ಯ ಹಳ್ಳೆರ ಹಾಗೂ ಅವನ ಹೆಂಡತಿ ಬೇಬಿ ಹಾಗೂ ಅವನ ಮಕ್ಕಳಾದ ಪ್ರಥಮ್ ಇವರಿಗೆ ಗಂಭೀರ ಗಾಯಗಳಾಗಿದ್ದು ಇನ್ನೊಬ್ಬ 3 ವರ್ಷದ ಮಗ ಮನ್ವಿತ್ ಈತನಿಗೆ ಯಾವುದೇ ಗಾಯ ಆಗಿಲ್ಲ ಕೂಡಲೇ ಹಿಂದುಗಡೆಯಿಂದ ಬರುತ್ತಿದ್ದ 112 ದವರು ತಮ್ಮ ವಾಹನದಲ್ಲಿ ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿರುತ್ತಾರೆ.