ಭಟ್ಕಳ: 13ನೇ ಮರಿನ್ ಪೊಲೀಸ್ ಫೌಂಡೇಶನ್ ಕೋರ್ಸ್ ನಲ್ಲಿ ಸುಜ್ಞಾನ ಗೋಪಾಲ ನಾಯ್ಕ ಕುಮಟಾ ಕೋನಳ್ಳಿ ಅವರು ಎಲ್ಲ ವಿಭಾಗಗಳಲ್ಲೂ ಸಹ ಉನ್ನತ ಮಟ್ಟದ ಪ್ರದರ್ಶನವನ್ನು ನೀಡಿ ಕರ್ನಾಟಕ ಪೊಲೀಸ್ ವಿಭಾಗಕ್ಕೆ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ತಂದುಕೊಟ್ಟಿದ್ದು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
ಈ ಕೋರ್ಸ್ ಕೇಂದ್ರ ಗೃಹಇಲಾಖೆ ಅಡಿಯಲ್ಲಿ ನೇರವಾಗಿ ಇರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರಾಂತ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ ಗುಜರಾತ್ ಹಾಗೂ ನ್ಯಾಷನಲ್ ಅಕಾಡೆಮಿ ಆಫ್ ಕೋಸ್ಟಲ್ ಪೊಲೀಸಿಂಗ್ ಗುಜರಾತನ ಸಂಯೋಗದಲ್ಲಿ ನವೆಂಬರ್ 6 2023 ರಿಂದ ಜನವರಿ 13 2024 ರ ವರೆಗೆ ನಡೆದಿದೆ.
ಇಲ್ಲಿ ನ್ಯಾವಿಗೇಶನ್, ಡ್ರಗ್ಸ್ ಅಂಡ್ ಎಕ್ಸ್ಪ್ಲೋಸಿವ್, ಮೆರಿನ್ ಕಮ್ಯುನಿಕೇಶನ್, ಮೇರಿತಮ್ ಲಾ ಇತರೆ ವಿಷಯಗಳಲ್ಲಿ ತಮ್ಮ ಅತ್ಯದ್ಭುತ ಪ್ರದರ್ಶನವನ್ನು ನೀಡಿ ಕರ್ನಾಟಕ ರಾಜ್ಯಕ್ಕೆ ಹಾಗೂ ಕರ್ನಾಟಕ ಪೊಲೀಸ್ ಗೆ ಹೆಮ್ಮೆಯನ್ನು ತಂದಿದ್ದಾರೆ. ಅವರು ಕ್ರಿಯಾಶೀಲ ವ್ಯಕ್ತಿತ್ವ ಕಠಿಣ ಪರಿಶ್ರಮ ಸಮರ್ಪಣಾ ಮನೋಭಾವನೆ ಮುಂದಾಳತ್ವ ಗುಣಗಳು ಶ್ಲಾಘನೀಯವಾಗಿದೆ.
ಇದು ಕರ್ನಾಟಕ ಪೊಲೀಸ್ ಹೊಂದಿರುವ ವೃತ್ತಿ ಪರತೆಯ ಉನ್ನತ ಗುಣಮಟ್ಟವನ್ನು ಸೂಚಿಸುತ್ತದೆ. ಸುಜ್ಞಾನ ಗೋಪಾಲ ನಾಯ್ಕ ಯಶಸ್ವಿ ಸೇವೆ ಹಾಗೂ ಸ್ಪೂರ್ತಿದಾಯಕತ್ವವು ಅವರ ಸಹೋದ್ಯೋಗಿಗೆ ಸಹಕಾರಿಯಾಗಲಿದೆ. ಪ್ರತಿಯೊಬ್ಬರ ಸಾಮರ್ಥ್ಯದ ನಿರ್ಮಾಣಕ್ಕಾಗಿ ಕರ್ನಾಟಕ ಪೊಲೀಸರ ಬದ್ಧತೆಯನ್ನು ಹಾಗೂ ಗುಣಮಟ್ಟವನ್ನು ಎತ್ತಿ ಹಿಡಿಯುವಲ್ಲಿ ಪೊಲೀಸ್ ಇಲಾಖೆ ಸದಾ ಮುಂದೆ ಇರುತ್ತದೆ.