ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನಮ್ (ರಿ.) ಉಮ್ಮಚಗಿ ವತಿಯಿಂದ “ವ್ಯೋಮ ದರ್ಶಿನೀ” ಕೃತಕ ಲಘುತಾರಾಲಯ ಮತ್ತು ಗ್ರಹವಕ್ರಗತಿದರ್ಶಕಯಂತ್ರ, ಲಗ್ನಚಕ್ರಯಂತ್ರಗಳ ಸಂಚಾಲನಾ ಕಾರ್ಯಕ್ರಮವನ್ನು ಜ.30, ಮಂಗಳವಾರ ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ.
ಭಾರತದ ಹೆಮ್ಮೆಯ ‘ಇಸ್ರೋ’ ಬಾಹ್ಯಾಕಾಶ ಸಂಸ್ಥೆಯ ವಿಶ್ರಾಂತ ವಿಜ್ಞಾನಿ, ವಾಗ್ದೇವಿವಿಲಾಸ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ. ಹರೀಶ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಗಣಿತಜ್ಞ, ಜ್ಯೋತಿಷ್ಯವಿದ್ವಾಂಸ ವಿ.ನೀಲಕಂಠ ಯಾಜೀ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವದರ್ಶನ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ, ಅಂಕಣಕಾರ, ಸಾಮಾಜಿಕ ಕಾರ್ಯಕರ್ತ ಹರಿಪ್ರಕಾಶ ಕೋಣೆಮನೆ, ನಾರು ಮಂಡಳಿ ಭಾರತ ಸರಕಾರ ವ್ಯವಹಾರ ಅಭಿವೃದ್ಧಿ ಸಲಹೆಗಾರ ಶಿವಲಿಂಗಯ್ಯ ಎಸ್ ಅಲ್ಲಯ್ಯನವರಮಠ ಉಪಸ್ಥಿತರಿರಲಿದ್ದಾರೆ.
ಇದೊಂದು ವಿಶಿಷ್ಟವಾದ, ಪ್ರಾಯೋಗಿಕವಾದ ಜ್ಯೋತಿರ್ವಿಜ್ಞಾನ ಕಾರ್ಯಕ್ರಮವಾಗಿದ್ದು, ಜೊತೆಗೆ ವಿಶೇಷವಾಗಿ ಕಬ್ಬಿನಹಾಲು ಸಂಭ್ರಮ ನಡೆಯಲಿದ್ದು, ಸರ್ವರೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ.