Slide
Slide
Slide
previous arrow
next arrow

ಕನಸು ಸಾಕಾರಗೊಳ್ಳಲು ಪ್ರಾಮಾಣಿಕ ಪ್ರಯತ್ನ ಅಗತ್ಯ: ಸುಧೀರ ಪರಾಶರ್

300x250 AD

ಕಾರವಾರ: ನಗರದ ದಿವೇಕರ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಅದ್ದೊರಿಯಾಗಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಣಗಾ ಬಾಲಭವನ ಸ್ಕೂಲ್ ನ ಮುಖ್ಯೋಪಾಧ್ಯಾಪಕ ಸುಧೀರ ಪರಾಶರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರಿ ಸಾಧನೆಯ ಕನಸು ಇರಬೇಕು,ಕನಸನ್ನು ಸಾಕಾರಗೊಳಿಸಲು ಶ್ರದ್ಧೆಯಿಂದ ಸಮಯವನ್ನು ವ್ಯರ್ಥಗೊಳಿಸದೆ ಪ್ರಯತ್ನ ಪಡಬೇಕು ಎಂದರು. ಅಲ್ಲದೇ ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಗಳಿಸಿದರೆ ಸಾಲದು ಬದಲಾಗಿ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸದೃಢರಾಗಿ ಬೇರೆ ಬೇರೆ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಕೇಶವ ಕೆ.ಜಿ ಮಾತನಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿ ಎನಿಸಿಕೊಳ್ಳಬೇಕೆಂದರೆ ಉತ್ತಮ ನಡತೆ ರೂಢಿಸಿಕೊಳ್ಳಬೇಕು.ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕದ ಜೊತೆಗೆ ಕ್ರೀಡೆ , ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು. ವೇದಿಕೆಯಲ್ಲಿ ದೈಹಿಕ ನಿರ್ದೇಶಕರಾದ ಡಾ.ಬಿ.ಆರ್.ತೊಳೆ ಗ್ರಂಥಪಾಲಕ ಸುರೇಶ ಗುಡಿಮನಿ ಕಲಾ ವಿಭಾಗದ ಮುಖ್ಯಸ್ಥರಾದ ಪೂಜಾ ನಾಯ್ಕ ಉಪಸ್ಥಿತರಿದ್ದರು. ದಿವೇಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಲಿತಾ ಶೆಟ್ಟಿ ಎಲ್ಲಾ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ವಾರ್ಷಿಕ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ದತ್ತಿನಿಧಿಯನ್ನು ಪ್ರೀತಾ ಬ್ಯಾನರ್ಜಿ ಓದಿದರು. ಕ್ರೀಡಾ ವರದಿಯನ್ನು ಪ್ರಿಯಾಂಕಾ ನಾಯ್ಕ ವಾಚಿಸಿದರು. ಸಾಂಸ್ಕೃತಿಕ ವರದಿಯನ್ನು ನತಾಷಾ ಫರ್ನಾಂಡೀಸ್ ವಾಚಿಸಿದರು. ಪ್ರೇಮ ಚಾರಿಟೇಬಲ್ ಟ್ರಸ್ಟ್ ನ ವಿದ್ಯಾರ್ಥಿ ವೇತನದ ಯಾದಿಯನ್ನು ರಾಜೇಶ ಮರಾಠಿ ಓದಿದರು. ವಿದ್ಯಾರ್ಥಿಗಳಾದ ಪ್ರಿಯಾಂಕಾ ಬಾಂದೇಕರ ಸಂಗಡಿಗರು ಪ್ರಾರ್ಥಿಸಿದರು.ಉಪನ್ಯಾಸಕಿ ಫರ್ಜಿನ್ ಮುಲ್ಲಾ ನಿರೂಪಿಸಿದರು.ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಮಲ್ಲಿಕಾ ನಾಯ್ಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top