Slide
Slide
Slide
previous arrow
next arrow

ಜಾತಿ ನಿಂದನೆ ಆರೋಪ: ಸೂಕ್ತ ಕ್ರಮಕ್ಕೆ ಆಗ್ರಹ

300x250 AD

ಕಾರವಾರ: ಅಕ್ಷಯ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರು ಜಾತಿ ನಿಂದನೆ ಮಾಡಿದ್ದು ಈ ಬಗ್ಗೆ ದೂರು ದಾಖಲು ಮಾಡಿದ್ದರೂ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಹಳಿಯಾಳದ ಮ್ಯಾನ್ವಲ್ ಲೂಯಿಸ್ ಆರೋಪಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯ್ಲಲಿ ಮಾತನಾಡಿದ ಅವರು, ಅಂತೋನಿ ಫೌಲ್ ಡಿಕೋಸ್ತಾ ಎನ್ನುವವರು ಜ.16 ರಂದು ಬ್ಯಾಂಕಿಗೆ ಎಸ್.ಸಿ ಎಸ್.ಟಿ ಸಿಬ್ಬಂದಿ ನೇಮಕ ಹಾಗೂ ಆಡಳಿತ ಚುನಾವಣೆಯಲ್ಲಿ ಎಸ್.ಸಿ ಎಸ್.ಟಿಯವರಿಗೆ ಆದ್ಯತೆ ಕೊಡಬೇಕು ಎಂದು ಮನವಿ ಕೊಡಲು ಹೋಗಿದ್ದರು. ಈ ಸಂದರ್ಭದಲ್ಲಿ ನನ್ನ ಕಚೇರಿಗೆ ಹೇಗೆ ಬಂದಿದ್ದೀರಿ. ನಿಮ್ಮ ಸಮುದಾಯದವರು ಈ ಹುದ್ದೆಗೆ ಲಾಯಕ್ಕಿಲ್ಲ ಎಂದು ಅಸಹ್ಯಕರ ಶಬ್ದ ಬಳಸಿ ನಿಂದನೆ ಮಾಡಿದ್ದರು ಎಂಬುದಾಗಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಆದರೆ ಇನ್ನು ಕ್ರಮ ಕೈಗೊಂಡಿಲ್ಲ. ಎಸ್ ಸಿ ಎಸ್ ಟಿ ಕಾಯ್ದೆಯಡಿ ದೂರು ದಾಖಲು ಮಾಡಿದಾಗ ಆ ವ್ಯಕ್ತಿಯನ್ನು ವಿಚಾರಣೆ ನಡೆಸಬೇಕು. ಆದರೆ ಇನ್ನೂ ವಿಚಾರಣೆ ನಡೆಸಿಲ್ಲ. ಬಂಧಿಸಿಲ್ಲ ಎಂದು ದೂರಿದರು. ಆದರೆ ಕೇಸ್ ವಾಪಾಸ್ಸು ಪಡೆಯುವಂತೆ ಪ್ರಭಾವ ಬೀರುತ್ತಿದ್ದಾರೆ. ಇದಕ್ಕೆ ನಾವು ಒಪ್ಪುತ್ತಿಲ್ಲ.ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಯನ್ನ ಬಂಧಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ರಾಹುಲ್ ದಶರತ್, ದೀಪಕ್ ಮನೋಹರ್ ಧಾರವಾಡಕರ್ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top