ಕಾರವಾರ: ತಾಲೂಕು ಆಡಳಿತ ಕಾರವಾರ,ತಾಲೂಕಾ ಪಂಚಾಯತ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಅಸ್ನೋಟಿಯ ಶಿವಾಜಿ ವಿದ್ಯಾ ಮಂದಿರದಲ್ಲಿ ಬುಧವಾರ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನ 2024 ರ ಪ್ರಯುಕ್ತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಬುಧವಾರ ನಡೆಯಿತು. ಕಾರ್ಯಕ್ರಮವನ್ನು ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಸುವರ್ಣಾ ತಳೇಕರ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಉಪ ನಿರ್ದೇಶಕಿ ಹೆಚ್.ಹೆಚ್.ಕುಕನೂರ, ಮಕ್ಕಳ ನಡುವೆ ಲಿಂಗ ತಾರತಮ್ಯ ಮಾಡಬಾರದು, ಹೆಣ್ಣು ಮಕ್ಕಳ ಉಳಿವು ಮತ್ತು ರಕ್ಷಣೆ ಅವಶ್ಯವಾಗಿದ್ದು, ಹೆಣ್ಣು ಮಗಳು ಶಿಕ್ಷಣ ಪಡೆಯುವುದರಲ್ಲಿ ಹಿಂದೆ ಉಳಿಯಬಾರದು.ಅವರು ತಮ್ಮ ಬದುಕನ್ನು ಸಂಭ್ರಮಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ದಿನೇಶ ಗಾಂವಕರ ಡಾ.ಗಣೇಶ ಬಿಷ್ಠಣ್ಣನವರ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಮಿಲನ್ ಬಾಂದೇಕರ
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೋನಲ್ ಐಗಳ, ಮಕ್ಕಳ ರಕ್ಷಣೆ ಮತ್ತು ಕಾನೂನಾತ್ಮಕ ದತ್ತು ಸ್ವೀಕಾರ ಕುರಿತು ವಿಷಯ ಮಂಡಿಸಿದರು. ನ್ಯಾಯವಾದಿ ಧನಲಕ್ಷ್ಮೀ ಹಳದನಕರ ಫೋಕ್ಸೋ ಕಾಯ್ದೆ ಹಾಗೂ ಬಾಲಪರಾಧದ ಬಗ್ಗೆ ವಿಷಯವನ್ನು ತಿಳಿಸಿದರು. ಈ ಸಂದರ್ಭದಲ್ಲಿಜಿಲ್ಲಾ ನಿರೂಪಣಾಧಿಕಾರಿ ವೀರುಪಾಕ್ಷಗೌಡ ಪಾಟೀಲ್, ಸದಾಶಿವಗಡದ ಕೊಂಕಣ ಕೋ.ಅಪರೆಟಿವ್ ಸೊಸೈಟಿ ವ್ಯವಸ್ಥಾಪಕ ಸಾಂತಾ ಫನಾರ್ಂಡೀಸ್, ವೈಭವಆರ್ ನಾಯ್ಕ,ವಿದ್ಯಾರ್ಥಿನಿ ಪ್ರತಿನಿಧಿ ಅಶ್ವಿನಿ ದೇಸಾಯಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಅಂಗವಾಗಿ ಶಾಲಾ ಅಂಗಳದಲ್ಲಿ ತೆಂಗಿನ ಸಸಿ ನೆಡಲಾಯಿತು ಹಾಗೂ ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಸ್ಲೋಗನ್ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರತೀಕ್ಷಾ ಪಾಟೀಲ್ ಸಂಗಡಿಗರ ಪ್ರಾರ್ಥಿಸಿದರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ ನಾಯ್ಕರು ಸ್ವಾಗತಿಸಿದರು, ಜಯಶ್ರೀ ಪಟಗಾರ ನಿರೂಪಿಸಿದರು. ಸಭಾ ಕಾರ್ಯಕ್ರಮ ನಂತರ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.