Slide
Slide
Slide
previous arrow
next arrow

ಇಂದಿಗೂ ಲಿಂಗ ತಾರತಮ್ಯ ಮುಂದುವರಿಯುತ್ತಿರುವುದು ವಿಷಾದಕರ: ಡಾ. ಕೃಷ್ಣಾ ಜಿ

300x250 AD

ಹೊನ್ನಾವರ: ಸಮಾಜ ಆಧುನೀಕರಣಗೊಳ್ಳುತ್ತಿದ್ದರೂ ಲಿಂಗ ತಾರತಮ್ಯ ಇಂದಿಗೂ ಹಾಗೇ ಉಳಿದುಕೊಂಡಿದೆ. ದಿನೇ ದಿನೇ ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಆರೋಗ್ಯದ ವಿಚಾರದಲ್ಲಿಯೂ ಗಂಡು ಮಕ್ಕಳಿಗೆ ಸಿಗುವ ಪ್ರಾಮುಖ್ಯತೆಯಷ್ಟು ಹೆಣ್ಣುಮಕ್ಕಳಿಗೆ ಸಿಗುತ್ತಿಲ್ಲ. ಮನೆಯಲ್ಲಿ ಸಿಗುವ ಆಹಾರದಲ್ಲಿಯೂ ಇದೇ ತಾರತಮ್ಯ ಹೆಣ್ಣು ಮಕ್ಕಳಿಗೆ ಎಸಗಲಾಗುತ್ತಿದೆ. ಇದರಿಂದ ಹೆಚ್ಚು ಹೆಣ್ಣು ಮಕ್ಕಳು ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಸ್ತ್ರೀರೋಗ ತಜ್ಞರಾದ ಡಾ.ಕೃಷ್ಣಾ ಜಿ. ಹೇಳಿದರು. ಅವರು ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ನಡೆದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಹೇಳಿರುವಂತೆ ಸಮಾಜದ ಬೆಳವಣಿಗೆ ಎಂದರೆ ಕೇವಲ ರಸ್ತೆ, ಕಟ್ಟಡ, ಸೇತುವೆ ನಿರ್ಮಾಣಗಳಲ್ಲ. ಹೆಣ್ಣು ಮಕ್ಕಳು ಅಭಿವೃದ್ದಿ, ಸುರಕ್ಷತೆ, ಸಮಾನ ಅವಕಾಶ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೆಣ್ಣು ಮಕ್ಕಳು ಜನಿಸಿದರೆ ಬೇಸರಿಸದೆ ಸಂಭ್ರಮಿಸುವ ಮನಸ್ಥಿತಿ ಎಲ್ಲರಲ್ಲಿಯೂ ಉಂಟಾಗಬೇಕು. ಆಗ ಮಾತ್ರ ಹೆಣ್ಣು ಮಕ್ಕಳ ದಿನಾಚರಣೆಗೆ ಸಾರ್ಥಕವಾದಿತು. ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ರಾಜೇಶ ಕಿಣಿ ಮಾತನಾಡಿ, ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಮಾಡಬೇಡಿ. ವಯಸ್ಸಾದ ತಂದೆತಾಯಿಯಂದಿರನ್ನು ಅನಾರೋಗ್ಯದ ಸಂದರ್ಭದಲ್ಲಿ ಮುತುವರ್ಜಿಯಿಂದ ನೊಡಿಕೊಳ್ಳುವವರಲ್ಲಿ ಹೆಣ್ಣು ಮಕ್ಕಳೆ ಹೆಚ್ಚಿದ್ದಾರೆ. ಹೆಣ್ಣು ಅನ್ನುವ ಕಾರಣಕ್ಕೆ ಅವರಿಗೆ ಅವಕಾಶಗಳನ್ನು ತಪ್ಪಿಸಬಾರದು ಎಂದು ಹೇಳಿದರು. ತಜ್ಞ ವ್ಯೆದ್ಯರುಗಳಾದ ಡಾ|| ಅನುರಾಧ, ಡಾ|| ಶ್ವೇತಾ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣುಮಕ್ಕಳಿಗೆ ಮಕ್ಕಳ ಕಿಟ್ ನೀಡಿದರು. ಕಾರ್ಯಕ್ರಮದಲ್ಲಿ ತಜ್ಞ ವೈದ್ಯರುಗಳಾದ ಡಾ|| ಶಿವಾನಂದ ಹೆಗಡೆ, ಡಾ|| ರಮೇಶ ಗೌಡ, ಆಯುಷ್ಯ ವೈದ್ಯ ಡಾ|| ಗುರುದತ್ತ ಕುಲಕರ್ಣಿ, ಸೇರಿದಂತೆ ಶೂಶ್ರಷಾಧಿಕಾರಿಗಳು, ನಾನ್ ಕ್ಲಿನಿಕ್ ಸಿಬ್ಬಂದಿಗಳು, ತಾಯಂದಿರು ಹಾಜರಿದ್ದರು. ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top