Slide
Slide
Slide
previous arrow
next arrow

ಸಾತ್ವಿಕ ಆನಂದದ ಮೂಲಬೀಜದ ಬಿಂದು ‘ಶ್ರೀರಾಮ’: ಜಿ.ಎ. ಹೆಗಡೆ ಸೋಂದಾ

300x250 AD

ಶಿರಸಿ: “ಆತ್ಮಾನಾಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ” ಶ್ರೀರಾಮ ತಾನು ಅವತಾರೀ ದೇವರು ಎಂದು ಎಲ್ಲಿಯೂ ಹೇಳಿಕೊಳ್ಳದೇ, ಮನುಷ್ಯನಾಗಿ ಹುಟ್ಟಿ ಮನುಷ್ಯನಾಗಿಯೇ ಬದುಕಿ ಮನುಷ್ಯತ್ವದ ಮೌಲ್ಯಗಳನ್ನು ಬಿತ್ತಿ ಸದಾ ಸರ್ವದಾ ವಂದಿತನಾಗಿ, ಮರ್ಯಾದ ಪುರುಷೋತ್ತಮನಾಗಿದ್ದಾನೆ. “ರಾಮೋ ವಿಗ್ರಹವಾನ್ ಧರ್ಮಃ ಎಂಬ ಮಾತು ಸರ್ವಕಾಲಿಕ ಸತ್ಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ, ವಿದ್ವಾಂಸ ಡಾ|| ಜಿ.ಎ.ಹೆಗಡೆ ಸೋಂದಾ, ನುಡಿದರು. ಅವರು ವಿಶಾಲನಗರದಲ್ಲಿ ಮಂಜುನಾಥ ಕೃಪಾದಲ್ಲಿ ಹೊಂಗಿರಣ ಫೌಂಡೇಶನ (ರಿ.) ಏರ್ಪಡಿಸಿದ ರಾಮೋಪಾಸನೆಯ ಕಾರ್ಯಕ್ರಮದಲ್ಲಿ “ಮರ್ಯಾದಾ ಪುರುಷೋತ್ತಮ ಶ್ರೀರಾಮ” ಉಪನ್ಯಾಸ ನೀಡುತ್ತಾ ಹೀಗೆ ಹೇಳಿದರು.

ಅಣ್ಣ ತಮ್ಮಂದಿರು ಪ್ರೀತಿಯಿಂದ ಹೇಗೆ ಬದುಕಬೇಕು ಎಂಬುವುದಕ್ಕೆ ರಾಮಾಯಣ ಸಾಕ್ಷಿ ಬಿಂದು. ಸಹೋದರರು ಹೇಗೆ ಬದುಕಬಾರದು ಎಂಬುದಕ್ಕೆ ಮಹಾಭಾರತ ಕೇಂದ್ರಬಿಂದು. ಸನಾತನಿಗಳು ಕಂಡುಕೊಂಡ ಸಾತ್ವಿಕತೆಯ ಆನಂದದ ಮೂಲ ಬೀಜದ ಬಿಂದು ಶ್ರೀರಾಮ ಎಂದರು. ರಾಮನ ಚಾರಿತ್ರ್ಯ ಯುಗ ಯುಗಗಳಲ್ಲೂ ಆದರ್ಶವಾಗಿ ಪಥದರ್ಶನಕ್ಕೆ ಕಾರಣವಾಗುತ್ತದೆ ಎಂದರು. ಕಾರ್ಯಕ್ರಮದ ರೂವಾರಿ ಎಂ.ಜಿ.ಶಾಸ್ತ್ರೀ ಸ್ವಾಗತಿಸಿ ರಾಮೋತ್ಸವದ ಸಂಭ್ರಮದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಂಕರ, ಎಫ್. ಜಡೇಕರ್, ವಿಶಾಲನಗರ ರಾಮಲಲ್ಲಾನ ಪ್ರತಿಷ್ಠಾಪನೆ ಕಾರ್ಯಕ್ರಮವು ದೇಶದ ಸಾತ್ವಿಕ ಶಕ್ತಿಯ ಸಂಕೇತ. ಈ ಶತಮಾನದಲ್ಲಿ ನೆನಪಿಡುವ ದಿನ ಎಂದು ತಿಳಿಸಿ ರಾಮರಾಜ್ಯವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ವಿಶಾಲನಗರದ ರಾಮಭಜಕರಿಂದ ಭಜನೆ, ರಾಮನಾಮ ಜಪ, ದೀಪಾರಾಧನೆ ಮತ್ತು ಸಾಮೂಹಿಕ ಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ನಮ್ಮ ಜೀವಿತ ಕಾಲದಲ್ಲಿ ರಾಮ ಅಯೋಧ್ಯೆಯಲ್ಲಿ ಸ್ಥಾಪನೆಯಾದ ಎಂದು ಎಲ್ಲರೂ ಖುಷಿಪಟ್ಟಿದ್ದು ಸಂಭ್ರಮಕ್ಕೆ ಕಾರಣವಾಯಿತು. ಶಿಕ್ಷಕಿ ಶ್ರೀಮತಿ ಉಷಾ ಶಾಸ್ತ್ರೀ ವಂದನಾರ್ಪಣೆ ಗೈದರು.

300x250 AD
Share This
300x250 AD
300x250 AD
300x250 AD
Back to top