ಯಲ್ಲಾಪುರ: ಸ್ನೇಹ ಸಾಗರ ಶಾಲೆಯು ಸಂಸ್ಕೃತಿಯ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಬಹಳ ಪರಿಶ್ರಮದ ಅಂಗವಾಗಿ ಈ ವರ್ಷ ಸ್ನೇಹಸಾಗರ ಶಾಲೆಗೆ ಭರತನಾಟ್ಯ, ಸಂಗೀತ ಗಾಯನ ಮತ್ತು ಸಂಗೀತ ವಾದ್ಯಗಳ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕೇಂದ್ರದ ಅನುಮತಿ ದೊರೆತಿರುವುದಾಗಿ ಸ್ನೇಹಸಾಗರ ಶಾಲೆಯ ಆಡಳಿತ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಎಸ್. ಎಲ್. ಭಟ್ ಹೇಳಿದರು.
ಸ್ನೇಹ ಸಾಗರ ಶಾಲೆಯಲ್ಲಿ ನಡೆದ ಪತ್ರಿಕಾ ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಸಿದ್ಧೇಶ ಎ. ಎಸ್. ಹಾಗೂ ಸಂಗೀತ ಶಿಕ್ಷಕಿ ಭಾವನಾ ಹೆಗಡೆ ಅವರ ಉಪಸ್ಥಿತಿಯಲ್ಲಿ ಮಾತನಾಡಿದರು. ನಾಟ್ಯ ವಿದುಷಿ ಶೋಭಿತಾ ಶ್ರೀಕಾಂತ್ ( ವಿದ್ಯಾ ಜೋಗ್ ಭಟ್) ಅವರು ಮಾತನಾಡಿ ಈ ಶಾಲೆಯಲ್ಲಿ ಸಾಂಸ್ಕೃತಿಕ ವಿಭಾಗದ ಭರತನಾಟ್ಯ, ಸಂಗೀತಗಾಯನ, ತಬಲ ಮೊದಲಾದ ಪಕ್ಕವಾದ್ಯಗಳ ಪರೀಕ್ಷೆಗೆ ಅನುಕೂಲಕರವಾದ ಪರಿಸರವಿದ್ದು ಈ ವರ್ಷ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ ಮುಂಬೈ ಅವರಿಂದ ನಾಟ್ಯ ಶಿಕ್ಷಣದ ಪ್ರಾರಂಭಿಕ, ಪ್ರಾವೇಶಿಕ ಪ್ರಥಮ, ಹಾಗೂ ಪ್ರಾವೇಶಿಕ ಪೂರ್ಣ ಈ ಮೂರು ಪ್ರಕಾರದ ಪರೀಕ್ಷೆಗಳನ್ನು ನಡೆಸಲು ಪೂರ್ಣ ಪ್ರಮಾಣದ ಸಹಾಯ ದೊರಕಿದೆ ಎಂದರು. ಸ್ನೇಹ ಸಾಗರ ಇಂಗ್ಲೀಷ್ ಮೀಡಿಯಂ ರೆಸಿಡೆನ್ಸಿಯಲ್ ಸ್ಕೂಲ್ ಇದು ಪರೀಕ್ಷಾ ಕೇಂದ್ರದ ನೊಂದಣಿ ಆಗಿದ್ದು 1234 ಕೇಂದ್ರದ ನೊಂದಣಿ ಸಂಖ್ಯೆ ಆಗಿರುತ್ತದೆ, ಪರೀಕ್ಷೆಯು ಬರುವ ಎಪ್ರಿಲ್ ತಿಂಗಳಿನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ವರ್ಷದ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಊಟ-ಉಪಚಾರಗಳ ವಸತಿ ವ್ಯವಸ್ಥೆಯನ್ನು ನೀಡಲಾಗುವುದು ಹಾಗೂ ತಾಲೂಕಿನ ಸುತ್ತ-ಮುತ್ತಲಿನ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಲಿ, ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಸಾಧನೆಗಳಿಸಲಿ ಎಂದು ಎಸ್. ಎಲ್. ಭಟ್ ಆಶಿಸಿದರು. ಶಾಲೆಯ ಸಾಂಸ್ಕೃತಿಕ ವಿಭಾಗದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಹೆಚ್ಚಿನ ಮಹಿತಿಗಾಗಿ ಶಾಲೆಗೆ ಭೇಟಿ ನೀಡಿ ಅಥವಾTel:+919449067602 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.