Slide
Slide
Slide
previous arrow
next arrow

ಅಪಘಾತದಲ್ಲಿ ಕಾಲು ಕಳೆದುಕೊಂಡ ಯುವಕನ ಚಿಕಿತ್ಸೆ ನೆರವಾಗಲು ಮನವಿ

300x250 AD

ಹೊನ್ನಾವರ ತಾಲ್ಲೂಕಿನ ಹಳದಿಪುರ ಅಗ್ರಹಾರದ ಯುವಕ ಪ್ರಮೋದ ರಾಮಾ ಗೌಡ ಈತನು ಜನವರಿ 23ರಂದು ಕೆಲಸಕ್ಕೆಂದು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೆಳಿಗ್ಗೆ ಕುಮಟಾದ ಮಾಸ್ತಿಕಟ್ಟೆ ಸರ್ಕಲ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರಾಣಾಪಾಯದಿಂದ ಪಾರಾದರೂ ಅಪಘಾತದಲ್ಲಿ ಒಂದು ಕಾಲು ಮೊಣಕಾಲಿನ ಕೆಳಭಾಗದಲ್ಲಿ ಸಂಪೂರ್ಣ ಛಿದ್ರವಾದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ಕಾಲನ್ನೇ ಕತ್ತರಿಸಬೇಕಾದ ಕರುಣಾಜನಕ ಸ್ಥಿತಿ ಎದುರಾಗಿದ್ದು, ಆತನ ಚಿಕಿತ್ಸಾ ವೆಚ್ಚ ಅಂದಾಜು 6 ರಿಂದ 8 ಲಕ್ಷದವರೆಗೆ ಆಗಬಹುದೆಂದು ವೈದ್ಯರು ತಿಳಿಸಿದ್ದಾರೆ. ಆದರೆ ತೀರಾ ಬಡ ಕುಟುಂಬದವರಾದ ಇವರಿಗೆ ಅಷ್ಟೊಂದು ದುಡ್ಡು ಹೊಂದಿಸುವುದು ಕಷ್ಟವಾಗಿ ದಿಕ್ಕೇ ತೋಚದಂತಾಗಿದ್ದಾರೆ. ಕಾಲು ಕತ್ತರಿಸಿರುವುದರಿಂದ ಆಯುಷ್ಮಾನ್ ಯೋಜನೆಯಡಿ ಸರಕಾರದ ನೆರವೂ ಲಭಿಸದು. ಆದ್ದರಿಂದ ಕುಟುಂಬವು ಈಗ ದಾನಿಗಳ ಮೊರೆ ಹೋಗಿದ್ದು ಸಹೃದಯಿಗಳು ಯುವಕನ ಕುಟುಂಬಸ್ಥರ ಖಾತೆಗೆ ಹಣ ಹಾಕಿ ಧನ ಸಹಾಯ ಮಾಡುವಂತೆ ವಿನಂತಿಸಲಾಗುತ್ತಿದೆ. ಆತನ ಸಹೋದರಿಯ ಖಾತೆ ಸಂಖ್ಯೆ ಜಾಗೂ ಫೋನ್ ಪೆ, ಗೂಗಲ್ ಪೆ ಸಂಖ್ಯೆ ಈ ಕೆಳಗಿನಂತಿದೆ.

ಕೆನರಾ ಬ್ಯಾಂಕ್ ಹಳದಿಪುರ ಶಾಖೆ
ಖಾತೆದಾರರ ಹೆಸರು: ಸುಜಾತಾ ರಾಮಾ ಗೌಡ
ಖಾತೆ ಸಂಖ್ಯೆ: 03172210040888
IFSC Code: CNRB0010317
Phonepe, Gpay No: Tel:+917483095619

300x250 AD
Share This
300x250 AD
300x250 AD
300x250 AD
Back to top