Slide
Slide
Slide
previous arrow
next arrow

ಬಾಳಿಗಾ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ

300x250 AD

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾಹಿತ್ಯ ವೇದಿಕೆ ಹಾಗೂ Iಕಿಂಅ ಘಟಕದ ಅಡಿಯಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕ, ಆಧ್ಯಾತ್ಮಿಕ ಚಿಂತಕ ವಿದ್ವಾನ್ ಗಣೇಶ್ ಭಟ್, ಭಾರತೀಯ ಶಿಕ್ಷಣ ಮತ್ತು ಶಿಕ್ಷಕ ನಡೆದು ಬಂದ ದಾರಿ ಕುರಿತು ಉಪನ್ಯಾಸ ಮಾಡುತ್ತಾ ವೇದಕಾಲದ ಶಿಕ್ಷಣದಿಂದ ಪ್ರಸ್ತುತ ಆಧುನಿಕ ಶಿಕ್ಷಣದ ಕುರಿತು ಮತ್ತು ಶಿಕ್ಷಕರಲ್ಲಿ ಆದ ಬದಲಾವಣೆ ಕುರಿತು ದೃಷ್ಟಾಂತಗಳ ಮೂಲಕ ವಿವರಿಸಿದರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ಪ್ರೀತಿ. ಪಿ ಭಂಡಾರಕರ್‌ ಗುರುವೆಂಬುವನು ಕೇವಲ ವಿಷಯ ಜ್ಞಾನ ಮಾತ್ರವಲ್ಲ ಮೌಲ್ಯಾಧಾರಿತ ಜೀವನ ಶಿಕ್ಷಣ ನೀಡಬೇಕು ಮತ್ತು ಶಿಕ್ಷಕನಾದವನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಕುಮಾರಿ ಮಾನಸಾ ಭಟ್ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಘಟಕದ ಸಂಯೋಜಕರಾದ ಪ್ರೋ. ಉಮೇಶ ನಾಯ್ಕ ಎಸ್. ಜೆ. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಹಿತ್ಯ ಸಂಘದ ಕಾರ್ಯದರ್ಶಿಯಾದ ಮಹೇಶ್ ಕಲ್ಯಾಣಕರ ವಂದಿಸಿದರು. ಕೆನರಾ ಕಾಲೇಜ ಸೊಸೈಟಿಯ ಉಪಾಧ್ಯಕ್ಷರಾದ ದಿನಕರ ಎಂ. ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷರಾದ ಹನುಮಂತ ಕೆ. ಶಾನಭಾಗ, ಪ್ರೇರಣಾ ಟ್ರಸ್ಟ್ ಕುಮಟಾ ಅಧ್ಯಕ್ಷರಾದ ವಸಂತ ಭಟ್ ಹಾಗೂ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ವಿದ್ಯಾರ್ಥಿನಿ ವಿ. ಅನ್ವಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top