ಹಳಿಯಾಳ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಯ ಅನ್ವಯ ಹಳಿಯಾಳ ಪಟ್ಟಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನವು ಏಳನೇ ದಿನವಾದ ಭಾನುವಾರ ಪಟ್ಟಣದಲ್ಲಿರುವ ಕಿಲ್ಲಾ ಕೋಟೆ ಮಾರ್ಗದಲ್ಲಿರುವ ಪುರಾತನ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸಂಪನ್ನಗೊಂಡಿತು.
ಮಾಜಿ ಶಾಸಕರಾದ ಸುನೀಲ್ ಹೆಗಡೆ ನೇತೃತ್ವದಲ್ಲಿ ಈ ಸ್ವಚ್ಛತಾ ಅಭಿಯಾನದಲ್ಲಿ ಸ್ವಚ್ಛತಾ ಅಭಿಯಾನದ ಸಂಚಾಲಕರಾದ ಸಂತೋಷ ಘಟಕಾಂಬಳೆ, ಪುರಸಭೆ ಸದಸ್ಯರಾದ ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ಸಂಗೀತಾ ಜಾಧವ್, ರೂಪಾ ಗಿರಿ, ಪ್ರಮುಖರಾದ ಮಂಜುನಾಥ ಪಂಡಿತ, ವಿಲಾಸ ಯಡವಿ, ಉಲ್ಲಾಸ ಬೀಡಿಕರ, ಪ್ರದೀಪ ಹಿರೆೇಕರ, ತುಕಾರಾಮ ಪಟ್ಟೇಕರ, ಉದಯ ಜಾಧವ, ಶ್ರೀನಿವಾಸ ದೊಡ್ಡಮನಿ, ಅನಿಲ್ ಬೆಳಗಾಂವಕರ, ಪ್ರಶಾಂತ ನಾಯ್ಕ, ಶಿವಾನಂದ ಶೆಟ್ಟರ, ಮೋಹನ ಮೌಳಂಗಿ, ಆಕಾಶ ಉಪ್ಪಿನ, ಸುನೀಲ್ ಬಾಗಳೆ, ನಾರಾಯಣ ನಾಯ್ಕ, ಸುಭಾಸ ಹೊಂಡದಕಟ್ಟಿ, ರಘುನಾಥ ಮಾದರ, ರಾಜು ಹಳ್ಳುಕರ, ಜಯಲಕ್ಷ್ಮೀ ಚವ್ಹಾಣ, ರತ್ನಮಾಲಾ ಮುಳೆ, ಮಾಲಾ ಹುಂಡೇಕರ ಮೊದಲಾದವರು ಭಾಗವಹಿಸಿದ್ದರು.