ಹೊನ್ನಾವರ : ತಾಲೂಕಾ ಭಾರತ ಸೇವಾದಳ ಸ್ವಯಂಸೇವಕ ಸೇವಕಿಯರ ಒಂದು ದಿನದ ಪುನಶ್ಚೇತನ ಕಾರ್ಯಗಾರವನ್ನು ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷರಾದ ಯೋಗೇಶ್ ಆರ್. ರಾಯ್ಕರ ನೆರವೇರಿಸಿ ಮಾತನಾಡಿ ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಮೂಡಿಸುವಲ್ಲಿ ಭಾರತ ಸೇವಾದಳ ಸಹಕಾರಿಯಾಗಿದೆ ಎಂದು ಹೇಳಿದರು.
ಕ್ರಿಯಾಯೋಜನೆಯನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಾದ ಜಿ.ಎಸ್. ನಾಯ್ಕ ಬಿಡುಗಡೆಗೊಳಿಸಿ ಮಾತನಾಡಿ ಶಾಲೆಗಳಲ್ಲಿ ಭಾವೈಕ್ಯತೆ ಮತ್ತು ಒಗ್ಗಟ್ಟು ಮೂಡಿಸುವಲ್ಲಿ ಭಾರತ ಸೇವಾದಳ ಸಹಾಯಕಾರಿ ಎಂದರು.ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳ ತಾಲೂಕಾ ಅಧ್ಯಕ್ಷ ವಾಮನ ಎಸ್ ನಾಯ್ಕ ಮಾತನಾಡಿ ತಾಲೂಕಿನ ಶಿಕ್ಷಕರು ಭಾರತ ಸೇವಾದಳ ಕಾರ್ಯವನ್ನು ಉತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿ ಸದಸ್ಯರಾದ ಎಂ.ಬಿ. ಪೈ, ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಂ.ಜಿ.ನಾಯ್ಕ, ತಾಲೂಕ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂತೋಷ ಕುಮಾರ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀಮತಿ ಸಾಧನಾ ಬರ್ಗಿ, ಭಾರತ ಸೇವಾದಳ ತಾಲೂಕ ಸಮಿತಿಯ ಉಪಾಧ್ಯಕ್ಷರಾದ ಅಣ್ಣಪ್ಪ ಎಂ. ನಾಯ್ಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ತಾಲೂಕ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಅರುಣ ಕುಮಾರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಸುಧೀಶ ನಾಯ್ಕ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಾಬು ನಾಯ್ಕ, ಜಿಲ್ಲಾ ಸಮಿತಿ ಸದಸ್ಯರಾದ ಐ.ವಿ.ನಾಯ್ಕ ನಗರೆ, ಶ್ರೀಮತಿ ಕಲ್ಪನಾ ಹೆಗಡೆ, ತಾಲೂಕ ಸಮಿತಿ ಸದಸ್ಯರಾದ ಗಜಾನನ ನಾಯ್ಕ ಚಿತ್ತಾರ, ಲಂಬೋದರ ನಾಯ್ಕ ಬಳಕೂರು, ಪಾಂಡುರಂಗ ನಾಯ್ಕ ಮುಂತಾದವರು ಇದ್ದರು.
ಪ್ರಾರಂಭದಲ್ಲಿ ತಾಲೂಕ ಸಂಘಟಕರಾದ ಉದಯ ಆರ್. ನಾಯ್ಕ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಸಂಘಟಕರಾದ ರಾಘವ ಮುಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಣವಂತೆಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ವಿಠ್ಠಲ ಜಿ. ಭಟ್ಟ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ತಾಲೂಕ ಸಮಿತಿಯ ಕಾರ್ಯದರ್ಶಿಗಳಾದ ಗಜಾನನ ಎಂ. ನಾಯ್ಕ ಸರ್ವರನ್ನು ವಂದಿಸಿದರು. ನಂತರ ಶಿಕ್ಷಕರಿಂದ ಲೇಝಿಮ್, ಡಂಬಲ್ಸ್ ಮೊದಲಾದ ಕವಾಯಿತುಗಳನ್ನು ಮಾಡಿಸಲಾಯಿತು.