ಸಿದ್ದಾಪುರ : ಪಟ್ಟಣದಲ್ಲಿ ಸುಸಜ್ಜಿತವಾದ ಅಂಬೇಡ್ಕರ್ ಭವನ ನಿರ್ಮಿಸಿ ಕೊಡುವಂತೆ ತಾಲೂಕ ವಿವಿಧ ದಲಿತರ ಸಂಘಟನೆ ಒಕ್ಕೂಟದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ,ಸಚಿವ ಎಚ್ ಸಿ ಮಹದೇವಪ್ಪ ಅವರಿಗೆ ಮನವಿ ನೀಡಿದ್ದಾರೆ.
ತಾಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡದವರು 6500 ಹೆಚ್ಚು ಜನಸಂಖ್ಯೆ ಹೊಂದಿದ್ದೇವೆ (2011ಜನಗಣತಿ ಪ್ರಕಾರ ) ನಮ್ಮ ಸಮುದಾಯಗಳಿಗೆ ಸಾಂಸ್ಕೃತಿಕ, ವಿವಾಹ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನ ಮಾಡಲು ವ್ಯವಸ್ಥಿತ ಸಮುದಾಯ ಭವನ ಅತಿ ಅವಶ್ಯ ಇದೆ. ಸಮುದಾಯ ಭವನ ಎಲ್ಲ ಸಮುದಾಯದವರಿಗೂ ಉಪಯೋಗಕ್ಕೆ ಬರಲಿದೆ. ಜೋಗ ಮುಖ್ಯ ರಸ್ತೆ ಪಕ್ಕದಲ್ಲಿನ ಸ್ವೀಪರ್ ಕ್ವಾಟ್ರಸ್ ಗೆ ಮೀಸಲಿಟ್ಟ ಸರ್ವೇ ನಂ 100 ಅ ದಲ್ಲಿರುವ 20 ಗುಂಟೆ ಜಾಗದಲ್ಲಿ 10 ಗುಂಟೆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಿ ಕೊಡುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ನಂದನ್ ಬೋರ್ಕರ್, ಎಚ್ ಕೆ ಶಿವಾನಂದ, ಎಚ್ ಎನ್ ಕಿರಣ್ ಕುಮಾರ್ , ಚಂದ್ರು ಕಾನಡೆ, ಅಣ್ಣಪ್ಪ ಹಸ್ಲರ್, ಶಿವರಾಮ್ ಚೆನ್ನಯ್ಯ, ಪಾಂಡು ಸ್ವಾಮಿ, ಹೊನ್ನಪ್ಪ ವಡ್ಡರ, ಅಭಿಷೇಕ್ ಕೋರರ ಮುಂತಾದವರು ಉಪಸ್ಥಿತರಿದ್ದರು.