Slide
Slide
Slide
previous arrow
next arrow

ಚಾಕಪೀಸ್ ಬಳಸಿ ರಾಮಮಂದಿರ ಕಲಾಕೃತಿ ರಚಿಸಿದ ಹೊನ್ನಾವರದ ಪ್ರದೀಪ

300x250 AD

ಹೊನ್ನಾವರ: ತಾಲೂಕಿನ ಗೇರುಸೊಪ್ಪಾದ, ಬಸಾಕುಳಿಯ  ಚಂದ್ರಕಲಾ ಮತ್ತು ಮಂಜುನಾಥ ನಾಯ್ಕ ದಂಪತಿಯ ಪುತ್ರನಾದ ಪ್ರದೀಪ ನಾಯ್ಕ, ಚಿಕ್ಕಂದಿನಿಂದಲೂ ವಿವಿಧ ಕಲೆಯಲ್ಲಿ ಆಸಕ್ತಿಯನ್ನು ಹೊಂದಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಚಿತ್ರಕಲೆ ,ತಬಲಾ ,ಸಂಗೀತ , ಚಾಕ್ ಪೀಸ್ ಆರ್ಟ್ ಹೀಗೆ ಹಲವು ರಂಗದಲ್ಲಿ ಸಾಧನೆ ಮಾಡಿದ್ದರು.

 ಇದೀಗ ಸರಿ ಸುಮಾರು 1200 ಚಾಕ್ ಪೀಸ್ ಬಳಸಿ 250 ಕ್ಕೂ ಹೆಚ್ಚು ಗಂಟೆಯ ನಿರಂತರ ಪ್ರಯತ್ನದ ಫಲವಾಗಿ ರಾಮ ಮಂದಿರದ ಮಾದರಿ ಕಲಾಕೃತಿಯನ್ನು  ಮಾಡಿದ್ದಾರೆ. ಜನವರಿ ೨೨ರ ರಾಮಮಂದಿರದ ಉದ್ಘಾಟನೆಯ ದಿನವೇ ತಮ್ಮ ಕಲೆಯನ್ನು ಗೇರುಸೊಪ್ಪಾದ  ಶ್ರೀ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಂದೆ ತಾಯಿ, ಗುರುಹಿರಿಯರ ಸಮ್ಮುಖದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಗೋವಿಂದ ಎಸ್ ನಾಯ್ಕ ಹಾಗೂ  ಶ್ರೀ ಸೀಮಾ ಮುಖ್ಯಪ್ರಾಣ ದೇವಸ್ಥಾನದ ಪ್ರಧಾನ ಅರ್ಚಕರಾದ  ಸೂರಾಲು ಚಂದ್ರಶೇಕರ್ ಭಟ್ ದಿವ್ಯಹಸ್ತದಿಂದ  ಅನಾವರಣಗೊಳಿಸಲಿದ್ದಾರೆ.

300x250 AD

 2021 ಮೇ 22 ರಂದು 18 ಚಾಕ್ ಪೀಸ್ ನಲ್ಲಿ ರಾಷ್ಟ್ರಗೀತೆಯನ್ನು  ಕೆತ್ತಿ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸಾಧನೆ ಮಾಡಿದ್ದರು.  ಬುದ್ಧ , ಗಾಂಧೀಜಿ , ಐಫೆಲ್ ಟವರ್, ಸೂರ್ಯನಮಸ್ಕಾರ ದ ಆಕೃತಿ ಹೀಗೆ ಹತ್ತು ಹಲವು ಆಕೃತಿಯನ್ನು ಮಾಡಿ ಎಲ್ಲರನ್ನು ಆಕರ್ಷಿಸಿದ್ದರು.    ಪ್ರಸ್ತುತ ಅವರು ಧಾರವಾಡದ ವಿದ್ಯಾಗಿರಿಯ ಜೆ. ಎಸ್. ಎಸ್ ವಿದ್ಯಾಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡುತ್ತಿದ್ದಾರೆ.

Share This
300x250 AD
300x250 AD
300x250 AD
Back to top