ಅಂಕೋಲಾ: ತಾಲೂಕಿನ ಸುಂಕಸಾಳ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಇತ್ತೀಚಿಗೆ ಅತಿ ವಿಜೃಂಭಣೆಯಿಂದ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕರು ಮಾತನಾಡಿ ಶಾಲೆ ಆರಂಭಗೊಂಡು 70 ವರ್ಷ ಕಳೆದರೂ ಇಂತಹ ಕಾರ್ಯಕ್ರಮ ಆಯೋಜಿಸಿರಲಿಲ್ಲ. ಇಂತಹ ಅದ್ಭುತ ಕಾರ್ಯಕ್ರಮವನ್ನು ಸಂಘಟಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸಂದೀಪ ನಾಯ್ಕರಿಗೆ ಅಭಿನಂದನೆಗಳನ್ನು ತಿಳಿಸಿದರು.
ಶಾಲೆಯ ಏಳಿಗೆಗಾಗಿ ಹಳೆಯ ವಿದ್ಯಾರ್ಥಿ ಸಂಘವನ್ನು ಸ್ಥಾಪಿಸಿ ಉದ್ಘಾಟನೆ ಮಾಡಲಾಗಿದ್ದು, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣಪತಿ ನಾಯಕ ಮೂಲೆಮನೆ ಮಾತನಾಡಿ ಕನ್ನಡ ಶಾಲೆ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು. ಅಲ್ಲದೇ ಸುಂಕಸಾಳ ಕನ್ನಡ ಶಾಲೆಗೆ 1ನೇ ತರಗತಿ ಸೇರ್ಪಡೆಯಾಗುವ ಪ್ರತಿ ವಿದ್ಯಾರ್ಥಿಗೆ 1000 ರೂ. ನೀಡುವುದಾಗಿ ಘೋಷಿಸಿದರು.
ಪತ್ರಕರ್ತ ರಾಘು ಕಾಕರಮಠ ಮಾತನಾಡಿ, ನನ್ನ ಸ್ನೇಹಿತ ಸಂದೀಪ ನಾಯ್ಕ ಹಳೆಯ ವಿದ್ಯಾರ್ಥಿ ಸಂಘದ ವಾಟ್ಸಾಪ್ ಗ್ರೂಪ್ ಮಾಡಿ ಹಲವರಿಗೆ ಸಹಾಯ ಆಗುವಂತೆ ಮಾಡಿರುವುದು ಸಂತೋಷಯ ವಿಷಯ. ಈ ಸಂಘಕ್ಕೆ ಹೆಲ್ಪ್ ಲೈನ್ ಸಹಾಯವಾಣಿ ಮಾಡಿಸಿಕೊಡುತ್ತೇನೆ ಎಂದು ಹೇಳಿದರು. ಸುನೀಲ್ ನಾಯ್ಕ ಮಾತನಾಡಿ ಈ ಸಂಘಕ್ಕೆ ಗಣಪತಿ ನಾಯಕ ಮೂಲೆಮನೆ ಅಧ್ಯಕ್ಷ ಆಗಿರುವುದು ಸಂಘಕ್ಕೆ ಆನೆಬಲ ಬಂದಂತಾಗಿದೆ. ರಾಮಲಿಂಗೇಶ್ವರ ದೇವಸ್ಥಾನದ ಮೋಕ್ತೆಸರರಾದ ನಾರಾಯಣ ಹಳೆಮನೆ ಹಾಗೂ ಎತ್ತರ ಜಿಗಿತದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರಕಾಶ ಗೌಡನಿಗೆ ಸನ್ಮಾನಿಸಲಾಯಿತು.