Slide
Slide
Slide
previous arrow
next arrow

ಉತ್ತಮ ಜೀವನಕ್ಕೆ ಮೌನ,ಧ್ಯಾನ, ಆಧ್ಯಾತ್ಮಿಕತೆ ಅತ್ಯಗತ್ಯ: ಶ್ರೀನಿವಾಸನ್

300x250 AD

ಶಿರಸಿ:  ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ  ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಭಗವದ್ ಅನುಗ್ರಹ ಕುರಿತು ತಪಸ್ವಿ, ನಿವೃತ್ತ ಇಂಜಿನಿಯರ್ ಶ್ರೀನಿವಾಸನ್ ಜಿ. ದೇಹವೇ ದೇವಾಲಯ ಎಂದು ತಿಳಿಸಿ, ಮೌನ, ಧ್ಯಾನ, ತಪಸ್ಸು,ಆಧ್ಯಾತ್ಮಿಕತೆ ಯಾಕೆ ಅಗತ್ಯ, ಅವುಗಳ ಪ್ರಯೋಜನವೇನು ಎಂಬ ಕುರಿತು ವಿವರವಾದ ಉಪನ್ಯಾಸ ನೀಡಿದರು.

 ನಂತರ ಶಿರಸಿ ಸಮೀಪದಬಳಗಂಡಿಯ ಶ್ರೀಮತಿ ಪ್ರತಿಮಾ ಶಶಾಂಕ ಹೆಗಡೆ ಹಾಗೂ ಶಿಷ್ಯೆಯರಿಂದ ನಡೆದ ಭರತನಾಟ್ಯ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಇದೇ ಸಂದರ್ಭ ದಲ್ಲಿ ಕ.ವಿ.ಪ್ರ.ನಿ.ನಿ.ಯ ನಿವೃತ್ತ  ಸಾಹಿತಿಗಳಾದ ಚಿಕ್ಕಲಿಂಗೆ ಗೌಡ  ಹಾಗೂ  ಸ.ಜಗನ್ನಾಥ,  ಪ್ರವಚನಕಾರ ಶ್ರೀನಿವಾಸನ್ ಜಿ , ಕಲಾವಿದೆ ಪ್ರತಿಮಾ ಬಳಗಂಡಿ ಇವರಿಗೆ ಗೌರವ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಚಿಕ್ಕಲಿಂಗೇ ಗೌಡ ಹಾಗೂ  ಸ.ಜಗನ್ನಾಥ ಸ್ವರಚಿತ ಪ್ರಸ್ತುತ ವಿದ್ಯಮಾನಗಳ ವ್ಯಂಗ್ಯ ಭರಿತ ಚಾಟೋಕ್ತಿ, ವೈಚಾರಿಕ ಕವನಗಳನ್ನು  ಹಾಡಿ ಸಭಿಕರನ್ನು  ನಗೆಗಡಲಿನಲ್ಲಿ ತೇಲಿಸಿ ಮೆಚ್ಚುಗೆಗೆ ಪಾತ್ರರಾದರು.

 ಸಂಘದ ಮಾಜಿ ಅಧ್ಯಕ್ಷ, ನಿವೃತ್ತ ಆರ್ಥಿಕ ಸಲಹೆಗಾರ  ಎಚ್.ಎಲ್. ಮುಕುಂದ ಅಧ್ಯಕ್ಷತೆ ವಹಿಸಿದ್ದರು. ನಾಡಗೀತೆಯೊಂದಿಗೆ ಆರಂಭವಾದ  ಸಮಾರಂಭದಲ್ಲಿ ಶ್ರೀಮತಿ ಪೂರ್ಣಿಮಾ ಗೋಪಾಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಉಪಲೆಕ್ಕ ನಿಯಂತ್ರಣಾಧಿಕಾರಿ ಕೆಂಪೇಗೌಡ, ಲೆಕ್ಕಾಧಿಕಾರಿ ಹೆಚ್. ಎಮ್. ಪದ್ಮಾವತಿ, ಭಾಗ್ಯ ಎ. ಅತಿಥಿಗಳ ಪರಿಚಯ ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರುಗಳಾದ ಕೆ. ರಾಮಚಂದ್ರ ರೆಡ್ಡಿ,ನಾರಾಯಣ ಗೌಡ, ಬಿ ಟಿ ರಾಮನ್, ,ಸಾಹಿತಿಗಳಾದ ಕೊಪ್ಪರಂ ಅನ್ನಪೂರ್ಣ, ಗಂಗೊಳ್ಳಿ ಪ್ರಭಾಕರ, ಸೊನ್ನದ, ಗೀತಾ ಸಭಾಹಿತ,  ಇತರರು ಉಪಸ್ಥಿತರಿದ್ದರು

300x250 AD

Share This
300x250 AD
300x250 AD
300x250 AD
Back to top