Slide
Slide
Slide
previous arrow
next arrow

ಭಾರತೀಯ ಪರಂಪರೆ,ಪುರಾತನ ಸಂಸ್ಕೃತಿ ಸಂಗೀತದಲ್ಲಡಗಿದೆ: ಪ್ರಮೊದ ಹೆಗಡೆ

300x250 AD

ಶಿರಸಿ :ಸಂಗೀತವೊಂದು ದೇವರ ಭಕ್ತಿಯ ಭಾಷೆಯಾಗಿದ್ದು, ಇದರಲ್ಲಿ ಸಂಸ್ಕೃತಿಯ ಆಯಾಮವಿದೆ. ವ್ಯಕ್ತಿಗತವಾಗಿ ಅಂತಃಕರಣ ದೈವಿಶಕ್ತಿ ತುಂಬುವ ಕಾರ್ಯ ಶಾಸ್ತ್ರೀಯ ಸಂಗೀತದಿಂದ ಆಗುತ್ತಿದ್ದು, ಬಾಲ್ಯದಿಂದಲೇ ಲಭಿಸಿದಾಗ ಜೀವನದ ಗುರಿ ಮುಟ್ಟಲು ಸಾಧ್ಯ ಎಂದು ಯಲ್ಲಾಪುರ ಸಂಕಲ್ಪ ಸಂಸ್ಥೆಯ ಪ್ರಮೋದ ಹೆಗಡೆ ಹೇಳಿದರು.

ಶಿರಸಿ ನಗರದ ಆರೋಹಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ದ್ವೈವಾರ್ಷಿಕ ಸಂಗೀತ ಸಮಾರೋಹವನ್ನು ದೀಪಬೆಳಗಿಸಿ, ತಂಬೂರಿ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಆರೋಹಿ, ಪ್ರರೋಹ ಎರಡು ಒಂದೇ ನಾಣ್ಯದ ಎರಡು ಮುಖಗಳು, ಇದರಲ್ಲಿ ಕೀರ್ತಿ ಗೌರವ ಎರಡು ಇದೆ. ಇಂತಹ ಗುರುಗಳಿಂದ ಸಂಸ್ಕಾರ ಪಡೆಯುವುದು ಮಕ್ಕಳ ಭಾಗ್ಯವಾಗಿದ್ದು ಇದರಿಂದ ಒಳ್ಳೆ ಮನುಷ್ಯನಾಗಲು ಅವಕಾಶವಾಗುತ್ತದೆ. ಇಂದು ಐಟಿ, ಬಿಟಿಗಳಿಗೆ ಹೋಗುವುದು ಸಹಜ ಆದರೆ ಪಾಲಕರು ತಮ್ಮ ಮಕ್ಕಳನ್ನು ಅಂತಹ ಶಿಕ್ಷಣದೊಂದಿಗೆ ಸಂಗೀತ ಕೂಡಾ ಮಾರ್ಗದರ್ಶಿಸಿದರೆ ಉತ್ತಮ ನಾಗರೀಕತೆಯೊಂದಿಗೆ ಈ ನೆಲದ ಕೀರ್ತಿ ತರಲು ಅವಕಾಶವಾಗುತ್ತದೆ ಎಂದರು.

ಇಲ್ಲಿ ಸಂಸ್ಕಾರ, ಸಂಸ್ಕೃತಿ ಎರಡೂ ಇದ್ದು ಭಾರತೀಯ ಪುರಾತನ ಮಹತ್ವ ಬೀರುತ್ತದೆ. ಉತ್ತರಕನ್ನಡ ಜಿಲ್ಲೆಯ ಶುದ್ದ ಸಂಗೀತ ಕ್ಷೇತ್ರವಾಗಿದ್ದು ಇಂದಿನ ಟೆನ್ಶನ್ ಯುಗದಲ್ಲಿ ನಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಲು ಸಂಗೀತ ಬಹಳ ಪ್ರಯೋಜನಕಾರಿ ಎಂದರು.

300x250 AD

ಅತಿಥಿಗಳಾಗಿದ್ದ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಅಧ್ಯಕ್ಷ ಲಯನ್ ಪ್ರಭಾಕರ ಹೆಗಡೆ ಮಾತನಾಡಿದರು. ವೇದಿಕೆಯಲ್ಲಿ ಗಾಯಕ ಡಾ. ಪಂಡಿತ್ ಶ್ರೀಪಾದ ಹೆಗಡೆ ಕಂಪ್ಲಿ, ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸಂಗೀತ ಉಪನ್ಯಾಸಕ ಡಾ.ಹರೀಶ ಹೆಗಡೆ ಹಳವಳ್ಳಿ, ಆರೋಹಿ ಪ್ರಾಚಾರ್ಯೆ ದೀಪಾ ಶಶಾಂಕ ಹೆಗಡೆ ಉಪಸ್ಥಿತರಿದ್ದರು. ಸಂಗೀತ ಶಾಲೆ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಆರೋಹಿ ಶೈಕ್ಷಣಿಕ ಕೇಂದ್ರದ ಅಧ್ಯಕ್ಷ ಶಶಾಂಕ ಹೆಗಡೆ ಎಲೆಮೆನೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಸಂಗೀತ ದಿಗ್ಗಜರಾದ ಉ. ರಶೀದ್ ಖಾನ್. ಡಾ. ಪ್ರಭಾ ಅತ್ರೆ ಇವರ ದಿವ್ಯಾತ್ಮಕ್ಕೆ ಶಾಂತಿ ಕೋರಿ ಮೌನ ಶೃದ್ಧಾಂಜಲಿ ಸಲ್ಲಿಸಲಾಯಿತು.

Share This
300x250 AD
300x250 AD
300x250 AD
Back to top