ಹಳಿಯಾಳ : ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆ ರಾಮಮಂದಿರದ ಮಂತ್ರಾಕ್ಷತೆಯನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯಕ್ರಮವನ್ನು ಭಾನುವಾರ ಮಾಜಿ ಶಾಸಕರಾದ ಸುನೀಲ್ ಹೆಗಡೆ ನೇತೃತ್ವದಲ್ಲಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಯಿತು.
ಸ್ಥಳೀಯ ಪ್ರಮುಖರು ಮನೆ ಮನೆಗಳಿಗೆ ಮಂತ್ರಾಕ್ಷತೆ ಮತ್ತು ಪ್ರಭು ಶ್ರೀರಾಮಚಂದ್ರನ ಭಾವಚಿತ್ರಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸುನೀಲ್ ಹೆಗಡೆಯವರ ಜೊತೆ ಸ್ಥಳೀಯ ಪ್ರಮುಖರಾದ ಅರವಿಂದ ಹಳ್ಳಿಕೇರಿ, ಸಚಿನ್ ಹಳ್ಳಿಕೇರಿ, ರಾಘವೇಂದ್ರ ದೊಡ್ಡಮನಿ, ಅರುಣ ಮಹೇಂದ್ರಕರ, ಅನಿಲ್ ಲಾಡ್, ಪ್ರಶಾಂತ ಮಹಾಲಿಂಗಪುರ, ಮಹೇಶ ಆನೆಗುಂದಿ, ವಿಶ್ವನಾಥ ಬೆಂಗಳೂರು, ಸುನಿಲ್ ಬೆಂಗಳೂರು, ವೇದಮೂರ್ತಿ ಹಿರೇಮಠ, ರಾಘು ಮೂಳೆ, ಅಕ್ಷಯ ಮಹೇಂದ್ರಕರ, ಮೊದಲಾದವರು ಉಪಸ್ಥಿತರಿದ್ದರು.