ಹಳಿಯಾಳ : ಜನವರಿ 22ರಂದು ಅಯೋಧ್ಯೆಯ ಶ್ರೀರಾಮಮಂದಿರ ಲೋಕಾರ್ಪಣೆಯ ಹಿನ್ನಲೆಯಲ್ಲಿ ಅಯೋಧ್ಯೆಯಿಂದ ಬಂದಂತಹ ಪವಿತ್ರ ಮಂತ್ರಾಕ್ಷತೆಯನ್ನು ಮತ್ತು ಆಮಂತ್ರಣ ಪತ್ರಿಕೆಯನ್ನು ಪಟ್ಟಣದಲ್ಲಿರುವ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ವಿ.ದೇಶಪಾಂಡೆ ಮನೆಗೆ ತೆರಳಿ ಖುದ್ದು ದೇಶಪಾಂಡೆಯವರಿಗೆ ನೀಡಲಾಯಿತು.
ಆಮಂತ್ರಣ ಪತ್ರಿಕೆ ಮತ್ತು ಮಂತ್ರಾಕ್ಷತೆ ಸ್ವೀಕರಿಸಿದ ಆರ್.ವಿ. ದೇಶಪಾಂಡೆ ಆಶೀರ್ವಾದದ ಮಂತ್ರಾಕ್ಷತೆಯನ್ನು ತಲುಪಿಸಿರುವುದಕ್ಕೆ ರಾಮಜನ್ಮಭೂಮಿ ಟ್ರಸ್ಟ್ ಪರಿವಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.