ಶಿರಸಿ: ನಗರದ ರೆಹಮನಿಯ ಕಮ್ಯುನಿಟಿ ಹಾಲ್ನಲ್ಲಿ ಖಾದರ್ ಆನವಟ್ಟಿ ನಾಯಕತ್ವದಲ್ಲಿ ಜ.13ರಂದು ನಡೆದ ಕಾರ್ಯಕ್ರಮದಲ್ಲಿ ಲೈಫ್ ಗಾರ್ಡ್ ತಂಡದ ಸದಸ್ಯರ ಸಮಾಜಮುಖಿ ಕೆಲಸಗಳನ್ನು ಮನದಾಳದಿಂದ ಪ್ರಶಂಶಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ತಂಡಕ್ಕೆ ಅಗತ್ಯವಾಗಿ ರಕ್ಷಣಾ ಕಾರ್ಯಕ್ಕೆ ಬೇಕಾಗಿದ್ದ ಮಂಗಳೂರಿನಲ್ಲಿ ತಯಾರಿಸಿದ ದೋಣಿ (ತೆಪ್ಪ)ಯನ್ನು ವಿಶೇಷವಾಗಿ ಕಾಳಜಿ ವಹಿಸಿ ತರಿಸಿ ಶಿರಸಿ ಡಿಎಸ್ಪಿ ಗಣೇಶ್ ಕೆ.ಎಲ್. ಮುಖಾಂತರ ಹಸ್ತಾಂತರಿಸಿದರು.
ಈ ಸಮಯದಲ್ಲಿ ಡಿಎಸ್ಪಿ ಗಣೇಶ್ ಕೆ.ಎಲ್. ಮಾರಿಕಾಂಬಾ ಲೈಪ್ ಗಾರ್ಡ್ ತಂಡದ ನಿಸ್ವಾರ್ಥ ಸೇವೆಯನ್ನು ಹಾಗೂ ತಂಡಕ್ಕೆ ತೆಪ್ಪವನ್ನು ಹಸ್ತಾಂತರಿಸಿದ ಹಿರಿಯರ ಕಾರ್ಯಕ್ಕೆ ಹಾಗೂ ತಂಡಕ್ಕೆ ಮಾರ್ಗದರ್ಶನ ನೀಡಿದ ಸಿಪಿಐ ರಾಮಚಂದ್ರ ನಾಯಕ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಪಿಐ ರಾಮಚಂದ್ರ ನಾಯಕ ಮಾತನಾಡಿ ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರ ಸೇವೆಯಲ್ಲಿ ನಿರತರಾಗಿರುವ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ತಂಡದ ಸದಸ್ಯರ ವೈಯಕ್ತಿಕ ಸಮಸ್ಯೆಗಳೇನಾದರೂ ಕಂಡು ಬಂದಲ್ಲಿ ಎಲ್ಲರೂ ಸೇರಿ ಸ್ಪಂದಿಸೋಣ ಎಂದರು.
ಖಾದರ್ ಅನವಟ್ಟಿ ಲೈಫ್ ಗಾರ್ಡ್ ತಂಡವು ಶಾಲ್ಮಲಾ ಹೊಳೆಯಲ್ಲಿ ಇತ್ತೀಚೆಗೆ ಮುಳುಗಿ ಮೃತಪಟ್ಟಿದ್ದ ಐದು ಜನರ ಮೃತದೇಹವನ್ನು ಪತ್ತೆ ಮಾಡುವಲ್ಲಿ ನಿರ್ವಹಿಸಿದ ತಂಡದ ಸದಸ್ಯರ ನಿಷ್ಕಲ್ಮಶ ಮನಸ್ಸು ಹಾಗೂ ಧೈರ್ಯವನ್ನು ಎಳೆ ಎಳೆಯಾಗಿ ಕೊಂಡಾಡಿದರು. ನಮ್ಮ ಫ್ರೆಂಡ್ಸ್ ಗ್ರೂಪ್ ಈ ಲೈಫ್ ಗಾರ್ಡ್ ತಂಡದ ಜೊತೆ ಯಾವತ್ತೂ ,ಎಲ್ಲ ರೀತಿಯಲ್ಲೂ ಸಹಕಾರಕ್ಕೆ ತಯಾರಾಗಿರುತ್ತದೆ ಎಂದರು. ಈ ಸಮಯದಲ್ಲಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸೀತಾರಾಮ್ ಪಿ. ಹಾಗೂ ಸಮಾಜದ ಮುಖಂಡರುಗಳಾದ ಸತ್ತಾರ ಹೆಗ್ಗರಣಿ, ಗಪರ್ ಆರೇಕೊಪ್ಪ, ಅಬ್ದುಲ್ ರೆಹಮಾನ್ ಹೆಗಡೆಕಟ್ಟಾ, ಅಶ್ಪಾಕ್ ಕುಮಟಾಕರ್, ಬಶೀರ್ ಅಜ್ದಿ, ಶುಕೂರ್ ರವರುಗಳು ಮಾರಿಕಾಂಬಾ ಲೈಪ್ ಗಾರ್ಡ್ ಮುಖ್ಯಸ್ಥ ಗೋಪಾಲ್ ಗೌಡ, ಸದಸ್ಯರುಗಳಾದ ರಾಘು ಗೌಳಿ, ದಿವಾಕರ್ ಆಚಾರಿ ಪ್ರದೀಪ್ ಎಸಳೆ ಸೇರಿ ಎಲ್ಲಾ ಲೈಫ್ ಗಾರ್ಡ್ಗಳು ಉಪಸ್ಥಿತರಿದ್ದರು.