Slide
Slide
Slide
previous arrow
next arrow

“ಮನೆ-ಮನೆಗೂ ಪೊಲೀಸ್” ಸಾರ್ವಜನಿಕ ಜಾಗೃತಿ ಕಾರ್ಯಕ್ರಮ

300x250 AD

ಶಿರಸಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2024 ರ ಅಂಗವಾಗಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಸಾರ್ವಜನಿಕರಿಗೆ ರಸ್ತೆ ಅಪಘಾತಗಳು ಹಾಗೂ ರಸ್ತೆ ಸುರಕ್ಷತಾ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲು ಶಿರಸಿ ನಗರ ಠಾಣೆಯ ಪೊಲೀಸ್ ಸಿಬ್ಬಂದಿಗಳು ತಮ್ಮ ತಮ್ಮ ಬೀಟ್ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಮನೆಗಳಿಗೆ ತೆರಳಿ ಜಾಗೃತಿ ಕರ ಪತ್ರಗಳನ್ನು ನೀಡಿ ಮನೆಯ ಸದಸ್ಯರಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ತಿಳುವಳಿಕೆಯನ್ನು ಮೂಡಿಸುವ ‘ಮನೆ-ಮನೆಗೂ ಪೊಲೀಸ್’ ಎಂಬ ವಿನೂತನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ,

ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಮನೆಗಳಿಗೆ  ಪೊಲೀಸರು ತೆರಳಿ ಜಾಗೃತಿ ಮೂಡಿಸಲಿದ್ದಾರೆ. ಪ್ರತಿಯೊಬ್ಬ ಸಾರ್ವಜನಿಕರಿಗೂ ರಸ್ತೆ ಸುರಕ್ಷತೆಯ ಅರಿವು ಮತ್ತು ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಸಿ ಅಪಘಾತಗಳಿಗೆ ಬ್ರೇಕ್ ಹಾಕುವ ಮೂಲ ಉದ್ದೇಶ ಪೊಲೀಸರ ಈ ಕಾರ್ಯದ ಹಿಂದೆ ಅಡಗಿದೆ. ನಗರ ಠಾಣಾ ವ್ಯಾಪ್ತಿಯ  ಗಣೇಶನಗರದ ಗಣಪತಿ ಭವನದಲ್ಲಿ ಕಾರ್ಯಕ್ರಮಕ್ಕೆ ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗಣೇಶ ಕೆ‌.ಎಲ್ ಚಾಲನೆಯನ್ನು ನೀಡಿ ಸಾರ್ವಜನಿಕರು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು,ಹಾಗೂ ಮನೆಗಳಿಗೆ ತೆರಳಿ ಜಾಗೃತಿ ಕರ ಪತ್ರಗಳನ್ನು ನೀಡುವ ಮೂಲಕ “ಮನೆ-ಮನೆಗೂ ಪೊಲೀಸ್” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,

300x250 AD

ಕಾರ್ಯಕ್ರಮದಲ್ಲಿ ಶಿರಸಿ ವೃತ್ತ ನಿರೀಕ್ಷಕರಾದ ರಾಮಚಂದ್ರ ನಾಯಕ, ಶಿರಸಿ ನಗರ ಠಾಣೆ ಪಿಎಸ್ಐ ನಾಗಪ್ಪ.ಬಿ. ಬೀಟ್ ಉಸ್ತುವಾರಿ ಹೊನ್ನಪ್ಪ ಅಗೇರ ಎಎಸ್ಐ ಬೀಟ್ ಸಿಬ್ಬಂದಿ ಮಂಜುನಾಥ ಪಾವಗಡ,ಅರುಣ, ಹಾಗೂ ಮುಖಂಡರಾದ ಪ್ರದೀಪ್ ಶೆಟ್ಟಿ,ಶೋಭಾ ನಾಯ್ಕ, ಮಾಲತಿ ಶೆಟ್ಟಿ, ಸುರೇಶ ಶೆಟ್ಟಿ, ಹೈಸ್ಕೂಲ್ ಮುಖ್ಯೊಪಧ್ಯಾಯರಾದ ಕೆ‌.ಎಲ್.ಭಟ್ ಮತ್ತು ಶಾಲಾ ಮಕ್ಕಳು,ಗಣೇಶ ನಗರದ ಸಾರ್ವಜನಿಕರು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top