ಕಾರವಾರ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ರಸ್ತೆ ಸುರಕ್ಷತೆಯ ಉಪಕ್ರಮದ ಭಾಗವಾಗಿ ಚಾಲಕ ಸಮುದಾಯದ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದಕ್ಕಾಗಿ ಮತ್ತು ಸಮಾಜದ ಸುರಕ್ಷತೆಗಾಗಿ ತಮ್ಮ ಧನಾತ್ಮಕ ಕೊಡುಗೆಯನ್ನು ಗೌರವಿಸಿ ಸಮಾಜವು ತಮ್ಮ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ಋಣಿಯಾಗಿರುತ್ತದೆ ಎಂಬ ಭರವಸೆಯನ್ನು ಚಾಲಕ ಸಮುದಾಯದಲ್ಲಿ ಮೂಡಿಸಲು ಪ್ರತಿವರ್ಷ ಜ. 24 ರಂದು ಚಾಲಕರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಸಂಸ್ಥೆಯು ಎಲ್ಲಾ ಚಾಲಕರಿಗೆ ತಮ್ಮ ಕರ್ತವ್ಯ ನಿರ್ವಹಣೆಯನ್ನು ಇನ್ನೂ ಉತ್ತಮ ಪಡಿಸಿ, ಪ್ರತಿನಿತ್ಯ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಿರುವ ಕರ್ತವ್ಯಕ್ಕೆ ಕೃತಜ್ಞತೆ ಸಲ್ಲಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಜ. 24ರಂದು ಸಾರ್ವಜನಿಕರು, ಪ್ರಯಾಣಿಕರು, ಹಾಗೂ ವಿದ್ಯಾರ್ಥಿಗಳು ಸಂಸ್ಥೆಯ ಚಾಲಕರನ್ನು ಬಸ್ ನಿಲ್ದಾಣಗಳಲ್ಲಿ ಮತ್ತು ಗ್ರಾಮೀಣ ಭಾಗದ ಬಸ್ ತಂಗುದಾಣದಲ್ಲಿ ಹೂ ಗುಚ್ಚ, ಸಿಹಿ ನೀಡಿ ಗೌರವಿಸಬಹುದಾಗಿದೆ ಎಂದು ಶಿರಸಿ ವಿಭಾಗದ ವಾಯವ್ಯ ಕರ್ನಾಟಕ ರಸ್ತೆಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.