ಮುಂಬಯಿ: ಪ್ರಧಾನಿ ನರೇಂದ್ರ ಅವರು ಇಂದು ಸುಮಾರು 17,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಬಹು ನಿರೀಕ್ಷಿತ ಅಟಲ್ ಸೇತು, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅನ್ನು ಲೋಕಾರ್ಪಣೆಗೊಳಿಸಿದ್ದಾರೆ. ಅಟಲ್ ಸೇತು ಭಾರತದ ಅತಿ ಉದ್ದದ ಸೇತುವೆ ಮತ್ತು ದೇಶದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ.
ಸೇತುವೆಯು ಸುಮಾರು 21.8 ಕಿಮೀ ಉದ್ದದ ಆರು-ಪಥದ ಸೇತುವೆಯಾಗಿದ್ದು, ಸಮುದ್ರದ ಮೇಲೆ ಸುಮಾರು 16.5 ಕಿಮೀ ಉದ್ದ ಮತ್ತು ಭೂಮಿಯ ಮೇಲೆ ಸುಮಾರು 5.5 ಕಿಮೀ ಉದ್ದವಿದೆ. ಇದು ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣ ಭಾರತಕ್ಕೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ. ಸೇವ್ರಿ-ಶಿವಾಜಿ ನಗರ (ಉಲ್ವೆ) ಮಾರ್ಗಕ್ಕೆ ರೂ.200 ಮತ್ತು 2.5 ಕಿಮೀ ಶಿವಾಯ್ ನಗರ-ಗವ್ಹಾನ್ ಮಾರ್ಗಕ್ಕೆ ರೂ.50 ಟೋಲ್ ನಿಗದಿಪಡಿಸಲಾಗಿದೆ. ರಿಟರ್ನ್ ಟ್ರಿಪ್‌ಗೆ ಟೋಲ್ ಏಕಮುಖ ಶುಲ್ಕಕ್ಕಿಂತ 1.5 ಪಟ್ಟು ಇರುತ್ತದೆ.
ಅಟಲ್ ಸೇತು ಅಥವಾ MTHL ಸೇತುವೆಯು ಶನಿವಾರ ಬೆಳಿಗ್ಗೆ ಪ್ರಯಾಣಿಕರಿಗೆ ತೆರೆದಿರುತ್ತದೆ. ಇದರಲ್ಲಿ ಮೋಟಾರ್‌ಸೈಕಲ್, ಮೊಪೆಡ್, 3-ಚಕ್ರ ಟೆಂಪೋ, ಆಟೋ-ರಿಕ್ಷಾಗಳು, ಟ್ರ್ಯಾಕ್ಟರ್‌ಗಳು, ಹೊರೆಯಿಲ್ಲದ ಟ್ರಾಲಿಗಳನ್ನು ಹೊಂದಿರುವ ಟ್ರಾಕ್ಟರ್, ಪ್ರಾಣಿಗಳು ಎಳೆಯುವ ವಾಹನಗಳು ಮತ್ತು ನಿಧಾನವಾಗಿ ಚಲಿಸುವ ವಾಹನಗಳು ಪ್ರಯಾಣಿಸುವಂತಿಲ್ಲ.