ಹೊನ್ನಾವರ: ತಾಲೂಕಿನ ಕಡತೋಕಾದಲ್ಲಿ ದಕ್ಷಿಣೊತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ‘ಶ್ರೀರಾಮ ವನಗಮನ’ ಯಕ್ಷಗಾನ ತಾಳಮದ್ದಲೆ ಜರುಗಿತು.
ಕಡತೋಕಾದ ರಾಜ್ಯ ಪ್ರಶಸ್ತ್ರಿ ವಿಜೇತರಾದ ನಿವೃತ್ತ ಶಿಕ್ಷಕ ತಾಳಮದ್ದಳೆ ಕಲಾವಿದರಾಗಿದ್ದ ದಿವಂಗತ ರಾಮಚಂದ್ರ ಎಸ್.ಹೆಗಡೆ ಹೆಗಡೆಮನೆ ಕಡತೋಕಾ ಇವರ ೪ ಪುಣ್ಯತಿಥಿಯ ಅಂಗವಾಗಿ ತಾಳಮದ್ದಳೆ ಆಯೋಜಿಸಲಾಗಿತ್ತು. ತಾಳಮದ್ದಳೆಯ ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನಸಾಲೆ, ಸುನೀಲ ಭಂಡಾರಿ ಕಡತೋಕಾ, ಪರಮೇಶ್ವರ ಭಂಡಾರಿ ಕರ್ಕಿ, ಗಜಾನನ ಸಾಂತೂರು, ಮುಮ್ಮೇಳದಲ್ಲಿ ದಶರಥನಾಗಿ ಸರ್ಪಂಗಳ ಈಶ್ವರ ಭಟ್, ಶ್ರೀರಾಮನಾಗಿ ಸದಾಶಿವ ಆಳ್ವ ತಲಪಾಡಿ, ಮಂಥರೆ ಶಂಭು ಶರ್ಮ ವಿಟ್ಲ, ಕೈಕೆಯಾಗಿ ಪ್ರೋ ಪವನ ಕಿರಣಕೆರೆ, ಲಕ್ಷ್ಮಣ ಗುರುಪ್ರಸಾದ ಭಟ್ ಮಾಡಗೇರಿ ಅಭಿನಯಿಸಿದರು. ತಾಳಮದ್ದಳೆಯ ಕೊನೆಯಲ್ಲಿ ಅಯೊಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ಶ್ರೀರಾಮ ಮಂದಿರದ ಹಿರಿಮೆಯ ಕುರಿತಾಗಿ ಹಾಡಿದ ಹಾಡು ಪ್ರೇಕ್ಷಕರಿಗೆ ಮುದ ನೀಡಿತು.
ಸೂರ್ಯನಾರಾಯಣ ಹೆಗಡೆ, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ ಶಿವಾನಂದ ಹೆಗಡೆ ಆಗಮಿಸಿದ ಕಲಾವಿದರಿಗೆ ಸನ್ಮಾನಿಸಿ ಗೌರವಿಸಿದರು. ಸಭಾ ಕಾರ್ಯಕ್ರಮದ ಮೂದಲು ಉದ್ಯಮಿದಾರರಾದ ಎಂ.ಕೆ.ಭಟ್, ಜಿ.ಎಂ.ಭಾಗ್ವತ, ಎಸ್.ಕೆ.ಹೆಗಡೆ ಕೂಜಳ್ಳಿ, ಡಾ. ಎಸ್.ಡಿ.ಹೆಗಡೆ, ಅಂಕಣಕಾರರಾದ ಶಂಕರ ನಾರಾಯಣ ಭಟ್, ರಾಜು ಹೆಬ್ಬಾರ, ಎನ್.ಆರ್.ಹೆಗಡೆ, ಮತ್ತಿತರರು ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.