ಶಿರಸಿ: ತಾಲೂಕಿನ ಬಾವಿಕೈ ಸಮೀಪದ ದಾಯಿಮನೆಯ ನಾಗೇಂದ್ರ ನರಸಿಂಹ ಭಟ್ಟ ಸಿಎ ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಸಾಧನೆ ಮಾಡಿದ್ದಾರೆ. ಇವರು ಲೀಲಾ ಮತ್ತು ನರಸಿಂಹ ಗಣಪತಿ ಭಟ್ ದಾಯಿಮನೆ ದಂಪತಿಗಳ ಪುತ್ರರು. ಪ್ರಾಥಮಿಕ ಶಿಕ್ಷಣವನ್ನು ಬಾವಿಕೈ ಸರಕಾರಿ ಶಾಲೆಯಲ್ಲಿ ಕಲಿತು ಬಳಿಕ ಮೂಡಬಿದ್ರೆಯಲ್ಲಿ ಪದವಿ ಪೂರ್ವ ಶಿಕ್ಷಣ ತನಕ ಪಡೆದಿದ್ದರು. ಬೆಂಗಳೂರಿನ ನಾರಾಯಣ ಭಟ್ಟ ಕಂಪನಿಯಲ್ಲಿ ಪೂರ್ವ ತರಬೇತಿ ಪಡೆದಿದ್ದು ಉಲ್ಲೇಖನೀಯ.
ಸಿಎ ಪರೀಕ್ಷೆಯಲ್ಲಿ ನಾಗೇಂದ್ರ ಭಟ್ ತೇರ್ಗಡೆ
