Slide
Slide
Slide
previous arrow
next arrow

ರಾಮಮಂದಿರ ಉದ್ಘಾಟನೆ: ಜ.14ರಿಂದ ವರದಳ್ಳಿಯಲ್ಲಿ ವಿವಿಧ ಕಾರ್ಯಕ್ರಮ

300x250 AD

ಸಾಗರ: ಅಯೋಧ್ಯೆಯಲ್ಲಿ ಸಾಕೇತ ಪುರವರಾಧೀಶ್ವರ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಪ್ರತಿಷ್ಠಾಪನಾ ಮಹೋತ್ಸವದ ಶುಭಸಂದರ್ಭದಲ್ಲಿ ಶ್ರೀ ಶ್ರೀಧರಾಶ್ರಮ, ಶ್ರೀಕ್ಷೇತ್ರ ವರದಪುರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ನಿಶ್ಚಯಿಸಲಾಗಿದೆ ಎಂದು ವರದಳ್ಳಿಯ ಶ್ರೀ ಶ್ರೀಧರ ಸೇವಾ ಮಹಾಮಂಡಲದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ರೀ ಶೋಭಕೃತ್ ಸಂ||ದ ಪುಷ್ಯ ಶುದ್ಧ ತೃತೀಯ ದಿನಾಂಕ 14-01-2024 ರ ಭಾನುವಾರದಿಂದ ಶ್ರೀ ಶೋಭಕೃತ್ ಸಂ||ದ ಪುಷ್ಯ ಶುದ್ಧ ದ್ವಾದಶಿ ದಿನಾಂಕ 22-01-2024ರ ಸೋಮವಾರದವರೆಗೆ ಶ್ರೀ ಆಂಜನೇಯ ಮೂಲಮಂತ್ರ ಸಹಿತ ಶ್ರೀರಾಮತಾರಕ ಹವನ ಕಾರ್ಯಕ್ರಮಗಳು ನಡೆಯುತ್ತವೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಆಗಮಿಸಿ ಶ್ರೀ ಸದ್ಗುರು ಕೃಪಾಶೀರ್ವಾದಗಳಿಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

300x250 AD
Share This
300x250 AD
300x250 AD
300x250 AD
Back to top