ಶಿರಸಿ: ನೂತನವಾಗಿ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನ್ಯಾಯಮೂರ್ತಿ ಎಲ್ ನಾರಾಯಣಸ್ವಾಮಿ ಅವರನ್ನು ಬೆಂಗಳೂರಿನಲ್ಲಿರುವ ಅಧ್ಯಕ್ಷರ ಆಯೋಗದ ಕಚೇರಿಯಲ್ಲಿ ಹೋರಾಟಗಾರ ಹಾಗೂ ಸ್ಫಂದನಾ ಲೀಗಲ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಭೇಟಿಯಾಗಿ ಅಭಿನಂದಿಸಿರುವುದಲ್ಲದೇ, ಜಿಲ್ಲೆಯಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಆಗುತ್ತಿರುವ ಘಟನೆಗಳ ಕುರಿತು ಚರ್ಚಿಸಿದರೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಸಂವಿಧಾನಬದ್ಧ ಹಕ್ಕಿನ ಅಡಿಯಲ್ಲಿ ಮಾನವನ ಹಕ್ಕಿಗೆ ವಂಚಿತವಾಗಿರುವ ಘಟನೆಗಳ ಕುರಿತು ಚರ್ಚಿಸಿದ್ದಲ್ಲದೇ, ಅರಣ್ಯವಾಸಿಗಳ ಮೇಲೆ ಕಾನೂನು ಬಾಹಿರವಾಗಿ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ಜರುಗುತ್ತಿರುವ ಕುರಿತು ಚರ್ಚೆಯ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.
ಆಯೋಗದ ಉದ್ದೇಶ:
ಹಕ್ಕುಗಳ ಉಲ್ಲಂಘನೆ ಆಗುವುದನ್ನು ತಡೆಯುವುದು ಹಾಗೂ ಆಗದಂತೆ ರಕ್ಷಣೆ ನೀಡುವುದು. ಅಲ್ಲದೇ, ಹುಕ್ಕುಗಳ ಉಲ್ಲಂಘನೆ ಒಳಗೊಂಡವರಿಗೆ ನೆರವು ನೀಡುವ ಕಾರ್ಯವನ್ನು ಮಾನವ ಹಕ್ಕುಗಳ ಆಯೋಗವು ಕರ್ತವ್ಯ ನಿರ್ವಹಿಸುವುದು. ಅದರಂತೆ, ಜೀವಿಸುವ ಮಾನವ ಘನತೆಯ, ಸಮಾನತೆಯ, ವೈಯಕ್ತಿಕ ಸ್ವಾತಂತ್ರ್ಯ, ಶೋಷಣೆ ಮತ್ತು ಗುಲಾಮಗಿರಿ ವಿರುದ್ಧ, ಧರ್ಮ ಮತ್ತು ವ್ಯಕ್ತಿ ಸ್ವಾತಂತ್ರ್ಯ, ಶಿಕ್ಷಣದ ಹಕ್ಕುಗಳ ಉಲ್ಲಂಘನೆ ಆದಲ್ಲಿ ಮಾನವ ಹಕ್ಕು ಆಯೋಗಕ್ಕೆ ಸಂಪರ್ಕಿಸಬಹುದೆಂದು ಹೋರಾಟಗಾರ ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಹೇಳಿದರು.