Slide
Slide
Slide
previous arrow
next arrow

ಚಿಣ್ಣರ ಅಂಗಳವಾದ ಸರಸ್ವತಿ ಪದವಿಪೂರ್ವ ಕಾಲೇಜು

300x250 AD

ಕುಮಟಾ: ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ರಂಗದಾಸ ಶಾನಭಾಗ ಹೆಗಡೆಕರ್ ಬಾಲ ಮಂದಿರದ ಪುಟಾಣಿಗಳು‌ ತಮ್ಮದೇ ಸಂಸ್ಥೆಯ ಪದವಿಪೂರ್ವ ಕಾಲೇಜಾದ ಬಿ ಕೆ ಭಂಡಾರಕರ್ ಸರಸ್ವತಿ ಪದವಿಪೂರ್ವ ಕಾಲೇಜಿಗೆ ಹೊರಸಂಚಾರ ಕಾರ್ಯಕ್ರಮದ ‌ನಿಮಿತ್ತ ಜ.6, ಶನಿವಾರದಂದು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ವಿಧಾತ್ರಿ ಅಕಾಡೆಮಿಯ ವತಿಯಿಂದ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯವುಳ್ಳ ಕಿರು ಚಲನಚಿತ್ರ ಪ್ರದರ್ಶಿಸಲಾಯಿತು. ಕಾಲೇಜಿನ ಪ್ರಯೋಗಾಲಯದಲ್ಲಿ ಸಂಸ್ಕರಿಸಿಟ್ಟ ಜೀವಿಗಳನ್ನು ಮಕ್ಕಳೆಲ್ಲರೂ ನೋಡಿ ಸಂಭ್ರಮಿಸಿದರು. ಬಳಿಕ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿ ತಿನಿಸು ವಿತರಿಸಿ ಬೀಳ್ಕೊಡಲಾಯಿತು. ವಿದ್ಯಾರ್ಥಿಗಳು ಸಂಭ್ರಮದಿಂದ ಭಾರತಮಾತೆಗೆ ಜಯಘೋಷ ಹೇಳುತ್ತ ವಾಪಸ್ಸಾದರು.

300x250 AD

ಈ ವೇಳೆ ಉಪಪ್ರಾಚಾರ್ಯೆ ಸುಜಾತ ಹೆಗಡೆ, ಉಪನ್ಯಾಸಕರುಗಳಾದ ಗಾಯತ್ರಿ ಕಾಮತ್ ಮುಖ್ಯ ಶಿಕ್ಷಕಿ ಸಾವಿತ್ರಿ, ರಮ್ಯಾ ಸಭಾಹಿತ, ಗುರುರಾಜ್ ಶೆಟ್ಟಿ, ಡಾ.ಅವಿನಾಶ್ ,ಶ್ರೀನಿಧಿ ನಾಯ್ಕ,ನಿತೀಶ್ ಬಾಲಮಂದಿರದ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಹೆಗಡೆ, ಜಯಾ ಶಾನಭಾಗ, ಸುಜಾತ ನಾಯ್ಕ, ರಾಧಿಕಾ ಶಾನಭಾಗ, ಜಯಲಕ್ಷ್ಮಿ ಪಟಗಾರ, ಜ್ಯೋತಿ ಭಂಡಾರಿ,ರಕ್ಷಾ ಕಿಣಿ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top