ಯಲ್ಲಾಪುರ: ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಮಂದಿರದ ಮಂಡಲೋತ್ಸವದ ಪ್ರಯುಕ್ತ ಮನೆಮನೆಗೆ ಅಯೋಧ್ಯೆಯ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯಕ್ರಮದ ಅಂಗವಾಗಿ ಸಂಸದರಾದ ಅನಂತಕುಮಾರ ಹೆಗಡೆ ಸೋಮವಾರ ಯಲ್ಲಾಪುರದ ಯುಗಾದಿ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಗಜಾನನ ನಾಯ್ಕ ಹಾಗೂ ಅಂಬೇಡ್ಕರ್ ಸೇನಾ ಸಮಿತಿ ಅಧ್ಯಕ್ಷರಾದ ಜಗನ್ನಾಥ್ ರೇವಣಕರ, ಸವಿತಾ ಸಮಾಜದ ಅಧ್ಯಕ್ಷರಾದ ನಾಗರಾಜ ಯಾಮಕೆ, ದೇವಾಡಿಗ ಸಮಾಜದ ಅಧ್ಯಕ್ಷರಾದ ರಾಮ ದೇವಾಡಿಗ ಇವರ ಮನೆಗೆ ಭೇಟಿ ನೀಡಿ ಶ್ರೀರಾಮ ಮಂದಿರ ಉದ್ಘಾಟನೆಯ ಆಮಂತ್ರಣ ಅಕ್ಷತೆಯನ್ನು ನೀಡಿದರು.