ಅಂಕೋಲಾ: ರೈಲಿನಲ್ಲಿ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನೆರೆ ರಾಜ್ಯದ ವ್ಯಕ್ತಿಯ ಮೇಲೆ ಅಂಕೋಲಾ ಠಾಣೆಯಲ್ಲಿ ದೂರು ದಾಖಲಾಗಿದೆ.
ದಕ್ಷಿಣ ಭಾರತದ ರಾಜ್ಯವೊಂದರ ಯುವತಿ ಮಂಗಳವಾರ ಪುಣಾ ಎಕ್ಸ್ಪ್ರೆಸ್ ರೈಲು ಸಂಖ್ಯೆ 11098ರಲ್ಲಿ ಪ್ರಯಾಣಿಸುತ್ತಿದ್ದರು. ಮುಂಜಾನೆ 7.30ಕ್ಕೆ ರೈಲು ಅಂಕೋಲಾ ಸಮೀಪದ ಮಾದನಗೇರಿ ರೈಲು ನಿಲ್ದಾಣಕ್ಕೆ ತಲುಪಿದ್ದು, ಯುವತಿ ಮಲಗಿದ್ದ ಸಮಯದಲ್ಲಿ ಆರೋಪಿ ಕಿರುಕುಳ ನೀಡಿದ್ದಾನೆ. ಆರೋಪಿಯನ್ನು ಹಾಲಿ ಮಹಾರಾಷ್ಟ್ರ ಸಾಂಗ್ಲಿಯಲ್ಲಿನ ಮೂಲತಃ ಕೇರಳ ರಾಜ್ಯದ ಕಣ್ಣೂರು ಮೂಲದ ಸುಬ್ಬರಾವ್ ದತ್ತಾತ್ರೇಯ ಚವಾಣ್ (47)ಎಂದು ಹೇಳಲಾಗಿದ್ದು, ಯುವತಿಗೆ ಅಮಾನುಷ ರೀತಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪಿ.ಎಸ್ ಐ ಉದ್ದಪ್ಪ ಧರೆಪ್ಪನವರ್ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.