ಸಿದ್ದಾಪುರ: ತಾಲೂಕಿನ ಹಲಗೇರಿಯ ಸೀತಾರಾಮ ಗಣಪತಿ ಹೆಗಡೆಯವರ ಷಷ್ಠ್ಯಬ್ದಿ ಸಮಾರಂಭದ ಪ್ರಯುಕ್ತ ಆಯ್ದ ಕಲಾವಿದರಿಂದ ಏರ್ಪಡಿಸಿದ “ಶರಸೇತು ಬಂಧನ” ತಾಳಮದ್ದಳೆ ಕಾರ್ಯಕ್ರಮ ಸರ್ವಾಂಗ ಸುಂದರವಾಗಿ ಮೂಡಿಬಂತು.
ನಾಟ್ಯಾಚಾರ್ಯ ಶಂಕರ ಭಟ್ಟರ ಅರ್ಜುನ, ಗೀತಾ ಹೆಗಡೆಯವರ ಹನುಮ, ಆನಂದ ಶೀಗೇಹಳ್ಳಿಯವರ ವೃದ್ಧ ಬ್ರಾಹ್ಮಣ ಹಾಗೂ ರಾಮರೂಪ – ಶ್ರೋತ್ರುಗಳ ಹರ್ಷೋದ್ಗಾರ ಹಾಗೂ ಕರತಾಡನಗಳ ಮೂಲಕ ಮೆಚ್ಚುಗೆಗೆ ಪಾತ್ರವಾದವು. ಹಿಮ್ಮೇಳದಲ್ಲಿ ಭಾಗವತರಾದ ಗಜಾನನ ಭಟ್ ತುಳಗೇರಿಯವರು ರಂಜನೀಯವಾಗಿ ಹಾಡಿದರು. ಮದ್ದಳೆವಾದಕರಾದ ಮಂಜುನಾಥ ಹೆಗಡೆ ಕಂಚಮನೆಯವರು ಉತ್ತಮ ಸಾತ್ ನೀಡಿ ರಂಜಿಸಿದರು.
ಕುಮಾರಿ ಅಂಜನಾ ಹೆಗಡೆ ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಉಮಾಪತಿ ಭಟ್ಟರು ಕಲಾವಿದರ ವಾಕ್ಪಟುತ್ವವನ್ನು ಶ್ಲಾಘಿಸಿದರು. ಮುಖ್ಯ ಅತಿಥಿ ಸುಬ್ರಹ್ಮಣ್ಯ ಭಟ್ಟರು ಅಪರೂಪದ ತಾಳಮದ್ದಳೆ ಅಂತಲೇ ಪ್ರಶಂಸಿಸಿದರು. ಸೀತಾರಾಮ ಹೆಗಡೆ ಹಾಗೂ ಮಮತಾ ಹೆಗಡೆಯವರು ಕಲಾವಿದರನ್ನ ಗೌರವಿಸಿದರು. ಶಿಕ್ಷಕಿ ಉಮಾ ಹೆಗಡೆ ಆಭಾರ ಮನ್ನಿಸಿದರು.