ಹೊನ್ನಾವರ: ತಾಲೂಕಿನ ಕಡ್ಲೆ ಗ್ರಾಮಪಂಚಾಯತ್ ಕಾರ್ಯಾಲಯದ ಹತ್ತಿರ ನಮ್ಮ ಸಂಕಲ್ಪ ವಿಕಸಿತ ಭಾರತ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿ ಮೋದೀಜಿ ಸರ್ಕಾರ ಕಳೆದ ಒಂಬತ್ತುವರೆ ವರ್ಷಗಳಲ್ಲಿ ಜಾರಿಗೆ ತಂದಿರುವ ಜನಪರ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ನರೇಂದ್ರ ಮೋದಿಜಿ ಎನ್ನುವ ಮಹಾಪುರುಷ ಪ್ರಧಾನಮಂತ್ರಿಯಾಗಿ ಸಿಕ್ಕಿರುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯ. ಸ್ವಾತಂತ್ರ್ಯಾ ನಂತರ 67 ವರ್ಷಗಳಲ್ಲಿ ಸಾಧ್ಯವಾಗದ ಹಲವಾರು ಕಾರ್ಯಗಳನ್ನು ಮೋದಿಜಿ ಕಳೆದ ಒಂಬತ್ತುವರೆ ವರ್ಷಗಳಲ್ಲಿ ಸಾಧಿಸಿ ತೋರಿಸಿದ್ದಾರೆ. ಅತ್ಯಾಧುನಿಕ ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಿವೆ. ಉಜ್ವಲಾ ಯೋಜನೆ, ಪಂಡಿತ್ ದೀನದಯಾಳ್ ಯೋಜನೆ, ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳು, ಜಲಜೀವನ ಮಿಷನ್, ಕಿಸಾನ್ ಸಮ್ಮಾನ್, ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ ಹೀಗೆ ಅನೇಕ ಅತ್ಯುತ್ತಮ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಮೋದಿಜಿಯವರು ಜಾರಿಗೆ ತಂದಿದ್ದಾರೆ. ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿದ ಕೀರ್ತಿ ಮೋದಿಸರ್ಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಕಡ್ಲೆ ಗ್ರಾಮಪಂಚಾಯತ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ ನಾಗರಾಜ ಭಾಗವತ್, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ್, ಹೊನ್ನಾವರ ಮಂಡಲ ಬಿಜೆಪಿ ಅಧ್ಯಕ್ಷ ರಾಜು ಭಂಡಾರಿ, ಪ್ರಧಾನ ಕಾರ್ಯದರ್ಶಿ ಸುರೇಶ ಹರಿಕಾಂತ, ಕೆನರಾ ಬ್ಯಾಂಕ್ ಮ್ಯಾನೇಜರ್ ಅಕ್ಷಯ್, ಕೆ. ವಿ. ಜಿ. ಬಿ. ಮ್ಯಾನೇಜರ್ ರಾಜಶೇಖರ್ ನಾಯ್ಡು, ಮಹಾಶಕ್ತಿಕೇಂದ್ರದ ಅಧ್ಯಕ್ಷ ರವಿ ಹೆಗಡೆ, ಎಫ್. ಎಲ್. ಸಿ. ಗಿರೀಶ್ ಭಂಡಾರಿ, ಗ್ರಾ. ಪಂ. ಸದಸ್ಯರುಗಳಾದ ಗೋವಿಂದ ಗೌಡ, ಗಜಾನನ ಮಡಿವಾಳ, ಶಕ್ತಿಕೇಂದ್ರ ಪ್ರಮುಖ ಮಹಾಬಲೇಶ್ವರ ಮಡಿವಾಳ ಹಾಗೂ ಇತರರು ಹಾಜರಿದ್ದರು.