ಅಂಕೋಲಾ: ಪದ್ಮಭೂಷಣ ಡಾ.ಹೆಚ್.ನರಸಿಂಹಯ್ಯ ಇವರ ಹೆಸರಿನಲ್ಲಿ ಸ್ಥಾಪಿಸಲಾದ ಡಾ.ಹೆಚ್.ಎನ್ ಪ್ರಶಸ್ತಿಯನ್ನು 2023-24ನೇ ಸಾಲಿಗೆ ಮಹಾದೇವ ಬೊಮ್ಮು ಗೌಡ ಇವರಿಗೆ ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ), ದೊಡ್ಡಬಳ್ಳಾಪುರ, ಬೆಂಗಳೂರು, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ,ಕರ್ನಾಟಕ ಸರಕಾರದ ವತಿಯಿಂದ ಶಿಕ್ಷಣ, ಸಾಹಿತ್ಯ, ವಿಜ್ಞಾನ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಗುರುತಿಸಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕೊಡಮಾಡುತ್ತದೆ. ಡಿಸೆಂಬರ್ 30 ರಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆದ ರಾಜ್ಯಮಟ್ಟದ ಮೂರನೇ ವೈಜ್ಞಾನಿಕ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಸಮ್ಮೇಳನಾಧ್ಯಕ್ಷರಾದ ಸತೀಶ ಲಕ್ಷ್ಮಣರಾವ್ ಜಾರಕಿಹೊಳಿ ಹಾಗೂ ಡಾ. ಹುಲಿಕಲ್ ನಟರಾಜ್ ನೇತೃತ್ವದಲ್ಲಿ ನೀಡಲಾಯಿತು. ಕುಮಟಾದ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿಯಲ್ಲಿ ವಿಜ್ಞಾನ ವಿಷಯದ ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹಾದೇವ ಬೊಮ್ಮು ಗೌಡ ಇವರಲ್ಲಿರುವ ವಿಜ್ಞಾನ ವಿಷಯ ಪರಿಣಿತಿ, ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ಈ ಪ್ರಶಸ್ತಿಯಿಂದ ಗೌರವ ಸಂದಂತಾಗಿದೆ.
ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಆನಂದ ಕೆ. ನಾಯ್ಕ ಮತ್ತು ಕಾರ್ಯದರ್ಶಿ ಮಂಜಪ್ಪ ಅಂಗರಗಟ್ಟಿ ಹಾಗೂ ಜಿಲ್ಲೆಯ ಸರ್ವ ಪದಾಧಿಕಾರಿಗಳು,ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಹನುಮಂತ ಬೊಮ್ಮು ಗೌಡ ಬೆಳಂಬಾರ ,ಮಹಾತ್ಮ ಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕ. ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ, ಕಾರ್ಯದರ್ಶಿ ಮೋಹನ ಬಿ.ಕೆರೆಮನೆ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಾಂತಾ ಎನ್. ನಾಯಕ ಆಶ್ರಯ ಫೌಂಡೇಶನ್ ಅಧ್ಯಕ್ಷರಾದ ರಾಜೀವ ಗಾಂವಕರ,ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿನಾಯಕ ನಾಯಕ,ಬ್ರಹ್ಮ ಜಟಗ ಯುವಕ ಸಂಘದ ಅಧ್ಯಕ್ಷರಾದ ಸಣ್ಣಪ್ಪ ನಾಯಕ,ಸದಸ್ಯರು, ಮುಖ್ಯಾಧ್ಯಾಪಕರಾದ ರೋಹಿದಾಸ ಗಾಂವಕರ ,ಶಿಕ್ಷಕ ವೃಂದದವರು ಹಾಗೂ ಊರ ನಾಗರಿಕರು ಮಹಾದೇವ ಬೊಮ್ಮು ಗೌಡರನ್ನು ಅಭಿನಂದಿಸಿ ಶುಭ ಹಾರೈಸಿದ್ದಾರೆ.