ಕಾರವಾರ: ಪ್ರಸಕ್ತ ಸಾಲಿನ ವಾ.ಕ.ರ.ಸಾ ಸಂಸ್ಥೆಯು ವಿಕಲಚೇತನರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಿಸುತ್ತಿದ್ದು, ವಿತರಿಸಿರುವ ಡಿ.31 ರ ವರೆಗೆ ಮಾನ್ಯತೆ ಹೊಂದಿರುವ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸುಗಳನ್ನು ದಿ:29-02-2024 ರ ವರೆಗೆ ಮಾನ್ಯತೆ ಮಾಡಲಾಗಿದೆ.
ಸದರಿ ಫಲಾನುಭವಿಗಳು ರೂ.660/- ನಗದಾಗಿ ಅಥವಾ ಡಿ.ಡಿ.ರೂಪದಲ್ಲಿ ತಮ್ಮ ವಾಸ್ತವ್ಯ ವ್ಯಾಪ್ತಿಯ ಘಟಕಗಳಾದ ಶಿರಸಿ, ಕುಮಟಾ, ಕಾರವಾರ, ಭಟ್ಕಳ, ಯಲ್ಲಾಪುರ, ಹಾಗೂ ಅಂಕೋಲಾ ಘಟಕದಲ್ಲಿ ಪಾವತಿಸಿ ವಿತರಿಸಿರುವ ಹಳೇ ಪಾಸನ್ನು ಹಿಂದಿರುಗಿಸಿ ದಿ:29-2-2024 ರೊಳಗಾಗಿ ನವೀಕರಣ ಮಾಡಿಕೊಳ್ಳಬೇಕು. ಹಾಗೂ ಅಂಗವಿಕಲರ ಪಾಸುಗಳ ನವೀಕರಣಕ್ಕೆ ಅವಕಾಶವಿರುವುದಿಲ್ಲ. 2024 ನೇ ಸಾಲಿನ ವಿಕಲಚೇತನ ಬಸ್ ಪಾಸ್ ವಿತರಣೆಯ ಸೇವಾ ಸಿಂಧು ಪೋರ್ಟಲ್ನಲ್ಲಿ ದಾಖಲಿಸಿ ಪಾಸ್ ಪಡೆಯಬೇಕೆಂದು ಶಿರಸಿ ವಾ.ಕ.ರ.ಸಾ ಸಂಸ್ದೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.