Slide
Slide
Slide
previous arrow
next arrow

ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

300x250 AD

ಕಾರವಾರ: ತಾಲೂಕಿನ ಹೊಟೆಗಾಳಿ, ಹೊನ್ನಾವಾರ ತಾಲೂಕಿನ ಮಂಕಿ ಸಿ(ಚಿತ್ತಾರ) ಮತ್ತು ಮಾಗೋಡ, ಕುಮಟಾ ತಾಲೂಕಿನ ಸೊಪ್ಪಿನಹೊಸಳ್ಳಿ, ಶಿರಸಿ ತಾಲೂಕಿನ ಸೋಂದಾ, ಹಳಿಯಾಳ ತಾಲೂಕಿನ ತಟ್ಟಿಗೇರಿ, ಹಾಗೂ ಸಿದ್ದಾಪುರ ತಾಲೂಕಿನ ತಂಡಾಗುಂಡಿ ಗ್ರಾಮ ಪಂಚಾಯತ ಗ್ರಂಥಾಲಯಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಚಾರಕರ ಹುದ್ದೆಗೆ ತಾತ್ಕಾಲಿಕವಾಗಿ ಮಾಸಿಕ ಗೌರವ ಸಂಭಾವನೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಸ್ಪರ್ಧಾತ್ಮಕ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಯು ದ್ವಿತೀಯ ಪದವಿ ಪೂರ್ವ ಪರೀಕ್ಷೆ (ಪಿಯುಸಿ) ಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ ಇನ್ ಲೈಬ್ರರಿ ಸೈನ್ಸ್ ಲ್ಲಿ ಪ್ರಮಾಣ ಪತ್ರ ಪಡೆದಿರತಕ್ಕದ್ದು, ಹಾಗೂ ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಟ ಮೂರು ತಿಂಗಳ ಕಂಪ್ಯೂಟರ್ ಕೋರ್ಸನಲ್ಲಿ ಉತ್ತೀರ್ಣರಾಗಿರಬೇಕು, ಅಭ್ಯರ್ಥಿಯು ಗ್ರಾಮ ಪಂಚಾಯತ ವ್ಯಾಪ್ತಿಯ ನಿವಾಸಿಯಾಗಿರಬೇಕು, ಅಭ್ಯರ್ಥಿಯು ಸ್ಥಳೀಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಗ್ಗೆ ಸಂಬಂಧಪಟ್ಟ ರಹವಾಸಿ ಪ್ರಮಾಣ ಪತ್ರವನ್ನು ತಹಶೀಲ್ದಾರರವರಿಂದ ಪಡೆದು ಲಗತ್ತಿಸಿರಬೇಕು, ಗ್ರಾಮ ಪಂಚಾಯತ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ನಿಗದಿ ಪಡಿಸಿದ ಸಮತಳ ಮೀಸಲಾತಿಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಸರ್ಕಾರದ ಆದೇಶ (ಸಂ: ಸಿಆಸುಇ/02/ಸಹಿಮ/2023 ದಿನಾಂಕ: 8-3-2023) ರನ್ವಯ ಕ್ರಮ ಜರುಗಿಸಲಾಗುವುದು. ಗ್ರಾಮ ಪಂಚಾಯತದಲ್ಲಿ ಮೀಸಲಾತಿ ಪ್ರಕಾರ ನಿಗದಿ ಪಡಿಸಿದ ವರ್ಗಕ್ಕೆ ಸೇರಿದ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸದೇ ಇರುವುದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ (ಗ್ರಾಮ ಪಂಚಾಯತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಸೇವಾ ನಿಯಮ 2022 ರ 6 ರೀತ್ಯಾ ತಾಲೂಕಿನ ಇತರೆ ಗ್ರಾಮ ಪಂಚಾಯತಗಳ ಪ.ಪಂಗಡ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು, (ಆಯಾ ತಾಲೂಕಿನವರಿಗೆ ಮಾತ್ರ ಸೀಮಿತವಾಗಿದೆ), ನಿಗದಿಪಡಿಸಲಾದ ಮೀಸಲಾತಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರ ನೀಡಿದ ದೃಢೀಕರಣ ಪತ್ರ, ಭರ್ತಿ ಮಾಡಿದ ಅರ್ಜಿಗಳನ್ನು ಎಸ್.ಎಸ್.ಎಲ್.ಸಿ ಅಂಕಪಟ್ಟಿ,ಪಿಯುಸಿ ಅಂಕಪಟ್ಟಿ ಟಿ.ಸಿ ಮೀಸಲಾತಿ ಪ್ರಮಾಣ ಪತ್ರ ಅಂಗವಿಕಲತೆ ಇದ್ದಲ್ಲಿ ದೃಢೀಕರಣ ಪತ್ರ ಹಾಗೂ ಇನ್ನಿತರ ವಿದ್ಯಾರ್ಹತೆ ಇದ್ದಲ್ಲಿ ದಾಖಲೆ ಇತ್ಯಾದಿಗಳೊಂದಿಗೆ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕು, ಕನಿಷ್ಠ 18 ವರ್ಷ, ಗರಿಷ್ಟ ಸಾಮಾನ್ಯ ಅರ್ಹತೆಯ ಅಬ್ಯಾರ್ಥಿಗಳಿಗೆ 35 ವರ್ಷ, ಪ್ರವರ್ಗ 2ಎ,2ಬಿ,3ಎ,3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷಗಳನ್ನು ಹೊಂದಿರಬೇಕು, ಗರಿಷ್ಟ ವಯೋಮಿತಿಯು ಅಲ್ಲದೇ ವಿಧವೆಯರು ,ಮಾಜಿ ಸೈನಿಕರು ಮುಂತಾದ ವರ್ಗದವರಿಗೆ ಸರ್ಕಾರವು ಕಾಲ ಕಾಲಕ್ಕೆ ನಿಗದಿಪಡಿಸುವ ವಯೋಮಿತಿಯನ್ನು ಕಲ್ಪಸುವುದು, ಆಯ್ಕೆ ವಿಧಾನ : ಸರ್ಕಾರಿ ಆದೇಶ ದಿನಾಂಕ 14-11-2022 ರ ನಿಯಮ 13 ಮತ್ತು 14 ರನ್ವಯ ಆಯ್ಕೆ ಮಾಡಲಾಗುವುದು, ಅರ್ಜಿ ನಮೂನೆಗಳು ಆಯಾ ಗ್ರಾಮ ಪಂಚಾಯತ ಕಚೇರಿಯಲ್ಲಿ ಪಡೆಯಬೇಕು, ಜಿಲ್ಲಾ ಪಂಚಾಯತ ಹಾಗೂ ಸದಸ್ಯ ಕಾರ್ಯದರ್ಶಿ,ಗ್ರಾ.ಪಂ.ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಮೇಲ್ವಿಚಾರಕರ ನೇಮಕಾತಿ ಸಮಿತಿ ಉಪ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top