ಭಟ್ಕಳ: ನಾಲ್ಕು ವರ್ಷದ ಬಾಲಕನೊರ್ವ ಸಂಶಯಾಸ್ಪದವಾಗಿ ರಸ್ತೆಯ ಮೇಲೆ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಮುಟ್ಟಳ್ಳಿ ರೇಲ್ವೆ ನಿಲ್ದಾಣ ರಸ್ತೆ ಬಳಿ ನಡೆದಿದೆ.
ಮೃತ ಬಾಲಕನನ್ನು ಬಂದರ ರೋಡ್ 2 ನೇ ಕ್ರಾಸ್ ನಿವಾಸಿ ಅರ್ಹಾನ್ (4 ವರ್ಷ) ಎಂದು ತಿಳಿದು ಬಂದಿದೆ. ಓರ್ವ ವ್ಯಕ್ತಿ ಬಾಲಕನ್ನು ಕರೆದುಕೊಂಡು ಬಂದು ತಮ್ಮ ಮನೆಯ ಸಮೀಪದ ರಸ್ತೆಯ ಮೇಲೆ ಈ ಹುಡುಗ ಬಿದ್ದುಕೊಂಡಿದ್ದು ಈತನಿಗೆ ಯಾವುದೋ ರಿಕ್ಷಾ ತಗುಲಿ ಬಿದ್ದಿರುವ ಬಗ್ಗೆ ಜನರು ಮಾತನಾಡುತ್ತಿದ್ದರು ಎಂದು ಹೇಳಿ ಬಿಟ್ಟು ಬಾಲಕನ ಮನೆಗೆ ಬಿಟ್ಟು ಹೋಗಿದ್ದರು. ಆದರೆ ಬಾಲಕನ ಹಣೆಯ ಭಾಗದಲ್ಲಿ ಗಾಯಗೊಂಡು ರಕ್ತ ಬರುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಉಡುಪಿಯ ಕೆ.ಎಂ.ಸಿ ಆಸ್ಪತ್ರೆಗೆ ಸಾಗಿಸಿದ್ದು .ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ ಅಲ್ಲಿಂದ ಪುನಃ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಬಾಲಕ ಸಾವನ್ನಪಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಆದರೆ ಬಾಲಕನಿಗೆ ಆಟೋ ರಿಕ್ಷಾ ಬಡಿದೆ ಸಾವನ್ನಪ್ಪಿದ್ದಾನೋ ಅಥವಾ ಬೇರೆ ಯಾವ ಕಾರಣದಿಂದ ಸಾವನ್ನಪ್ಪಿದ್ದನೋ ಎಂದು ನಮಗೆ ತಿಳಿದಿಲ್ಲ. ಆದರೆ ಈತನ ಸಾವಿನ ಬಗ್ಗೆ ನಮಗೆ ಸಂಶಯವಿದೆ ಎಂದು ಬಾಲಕನ ಚಿಕ್ಕಮ್ಮ ನಗ್ಮಾ ಮಹ್ಮದ ಗೌಸ್ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.