ಜೋಯಿಡಾ: ದೆಹಲಿಯಲ್ಲಿ ಕಳೆದ ಮೂರು ದಿನಗಳಿಂದ ನಡೆದ 67 ನೇ ರಾಷ್ಟ್ರೀಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾವಳಿಯಲ್ಲಿ ಜೋಯಿಡಾ ತಾಲೂಕಿನ ರಾಮನಗರದ ಬಿಜಿವಿಎಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಹಾಗೂ ಕುಸ್ತಿಪಟು ಶಾಲಿನಾ ಎಸ್. ಸಿದ್ದಿ ಈಕೆ 55 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ರಾಜ್ಯಕ್ಕೆ, ಜಿಲ್ಲೆಗೆ ಹಾಗೂ ತಾಲ್ಲೂಕಿಗೆ ಕೀರ್ತಿಯನ್ನು ತಂದಿದ್ದಾಳೆ.
ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಶಾಲಿನಿ.ಎಸ್.ಸಿದ್ದಿ ಈಕೆಯ ಸಾಧನೆಯ ಬಗ್ಗೆ ಬಿಜಿವಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವನಿತಾ ಪ್ರಭಾಕರ ರಾಣೆ , ಸಂಸ್ಥೆಯ ಪದಾಧಿಕಾರಿಗಳಾದ ಉಲ್ಲಾಸ ನಾಯ್ಕ, ಮಂಜುನಾಥ ಪವಾರ್, ಕಿಶೋರ ರಾಣೆ ಹಾಗೂ ಸದಸ್ಯರು, ಸ್ಥಳೀಯ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ಕಾಲೇಜಿನ ಪ್ರಾಚಾರ್ಯರಾದ ಮಂಜುನಾಥ್.ಎಚ್.ನಾಯ್ಕ, ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂಜಯ ಜಿ. ಗೌಡ ಮತ್ತು ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.