ಕಾರವಾರ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹಾಗೂ ಮಾನ್ಯ ಮುಖ್ಯ ಚುನಾವಣಾ ಅಧಿಕಾರಿ, ಕರ್ನಾಟಕ ಬೆಂಗಳೂರು ರವರ ಪ್ರಕಾರ ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಅರ್ಹತಾ ದಿನಾಂಕವನ್ನು ವಿಸ್ತರಿಸಲಾಗಿದೆ.
ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸುವ/ ಸ್ವೀಕರಿಸುವ ಅವಧಿ ಜ.12, ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ಇತ್ಯರ್ಥಪಡಿಸುವ ಕೊನೆಯ ದಿನಾಂಕ ಜ.17, ಮತದಾರರ ಪಟ್ಟಿಗಳ ಅಂತಿಮ ಪ್ರಕಟಣೆ ಜ.22 ರವರೆಗೆ ವಿಸ್ತರಿಸಲಾಗಿದೆ. ಮತದಾರರ ಪಟ್ಟಿಗಳು ಎಲ್ಲಾ ಮತಗಟ್ಟೆಗಳಲ್ಲಿ/ಗ್ರಾಮ ಪಂಚಾಯತ/ಗ್ರಾಮ ಚಾವಡಿ/ಮುನ್ಸಿಪಾಲಿಟಿ/ ತಹಶೀಲ್ದಾರರು/ಸಹಾಯಕ ಕಮೀಶನರ್ ಕಚೇರಿಗಳಲ್ಲಿ ಸಾರ್ವಜನಿಕರ/ಮತದಾರರ ಪರಿಶೀಲನೆಗೆ ಲಭ್ಯ ಇರುತ್ತದೆ. ಸಾರ್ವಜನಿಕರು/ಮತದಾರರು ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ದಾಖಲಾದ ಬಗ್ಗೆ ಖಚಿತಪಡಿಸಿಕೊಳ್ಳಲು ಹಾಗೂ ಒಂದು ವೇಳೆ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ದಾಖಲು ಆಗದೇ ಇರುವುದು ಕಂಡು ಬಂದಲ್ಲಿ ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ 6 ರಲ್ಲಿ, ಹೆಸರು ಕಡಿಮೆ ಮಾಡುವ ಬಗ್ಗೆ ನಮೂನೆ-7ರಲ್ಲಿ, ಹೆಸರಿನ ನಮೂದುಗಳಲ್ಲಿ ತಿದ್ದುಪಡಿ ಮಾಡಬೇಕಾದಲ್ಲಿ ನಮೂನೆ-8 ರಲ್ಲಿ ಮಾಹಿತಿ ತುಂಬಿ ಸಂಬಂಧಪಟ್ಟ ಮತಗಟ್ಟೆಗಳ ಬಿ.ಎಲ್.ಒ.ಗಳಿಗೆ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆಗಳು ಸಂಬಂಧಿಸಿದ ತಹಶೀಲ್ದಾರರ ಕಚೇರಿಗಳಲ್ಲಿ ಲಭ್ಯವಿರುತ್ತವೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.