ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಮಠದೇವಳ ಗ್ರಾಮದಲ್ಲಿಯ ಪುರಾತನ ಶಿಲಾಮಯ ದೇಗುಲ ಹಳೆಯೂರು ಶ್ರೀ ಶಂಕರ-ನಾರಾಯಣ. ಸುಮಾರು 500 ವರ್ಷಗಳ ಹಿಂದೆ ಸೋದೆ ಅರಸರ ಕಾಲದಲ್ಲಿ ಸ್ಥಾಪಿಸಲ್ಪಟ್ಟ ಈ ದೇಗುಲದಲ್ಲಿ ವಿಜೃಂಭಣೆಯಿಂದ ದೀಪೋತ್ಸವನ್ನು ನೆರವೇರಿಸಲಾಯಿತು.
ದತ್ತ ಜಯಂತಿ ಶುಭ ಸಂಧರ್ಭದಲ್ಲಿ ಮುಂಜಾನೆ 9 ಘಂಟೆಯಿಂದ ದೇವಳದ ಪ್ರಧಾನ ಕಂಬದಲ್ಲಿ ನೆಲೆಸಿರುವ ಶ್ರೀಮನ್ ಸ್ಥಂಭಗಣಪತಿಗೆ ಅಗ್ರ ಪೂಜೆ ಸಲ್ಲಿಸಿ, ಶ್ರೀ ಶಂಕರ ದೇವರಿಗೆ ಏಕಾದಶಿರುದ್ರ ಪೂಜೆ, ಶೀ ನಾರಾಯಣ ದೇವರಿಗೆ 108 ಪುರುಷ ಸೂಕ್ತ – ಶ್ರೀಸೂಕ್ತ ದೊಂದಿಗೆ ಫಲ – ಪಂಚಾಮೃತಾಭಿಷೇಕ ಪೂರ್ವಕ ಕಲ್ಪೊಕ್ತ ಪೂಜೆ ಸಲ್ಲಿಸಿ ಕುಂಕುಮಾರ್ಚನೆಯೊಂದಿಗೆ ಮಹಾಮಂಗಳಾರತಿ ಮಾಡಲಾಯಿತು.
ಸಂಜೆ 6-30 ರಿಂದ ಸೋಂದಾ ಕಸಬಾ ಮಾತೃ ಮಂಡಳ ಹಾಗೂ ಹಳೆಯೂರು ಶ್ರೀ ಶಂಕರ ನಾರಾಯಣ ಸ್ವ ಸಹಾಯ ಸಂಘದವರಿಂದ ಭಗವದ್ಗೀತೆ ಪಠಣ ಹಾಗೂ ಭಜನಾ ಸೇವೆ ನಂತರ ಶ್ರೀಶಂಕರ-ನಾರಾಯಣ ದೇವರುಗಳಿಗೆ ಮತ್ತು ಕಳೆದ ಜೂನ್ ಪ್ರಾರಂಭದಲ್ಲಿ, ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೆeoದ್ರಸರಸ್ವತೀಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಇವರು ಬ್ರಹ್ಮೋಪದೇಶ ನೀಡಿದ ಶ್ರೀ ಅಶ್ವತ್ಥ ವೃಕ್ಷಕ್ಕೂ ದೀಪೋತ್ಸವ ನೆರವೇರಿಸಲಾಯಿತು.
ಈ ಎಲ್ಲ ದೇವತಾ ಕಾರ್ಯಗಳನ್ನು ವಿದ್ವಾನ್, ನಾರಾಯಣ ಶಾಸ್ತ್ರಿಗಳು ಸದಾಶಿವದೇವಸ್ಥಾನ ಇವರ ಮಾರ್ಗದರ್ಶನದಲ್ಲಿ, ಮಹೇಂದ್ರ ಭಟ್ಟ ಸಂಪೇಸರ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಪೂಜಾ ವಿನಿಯೋಗದ ಯಜಮಾನತ್ವವನ್ನು ಊರವರ ಪರವಾಗಿ ಗೌರವ ಅರ್ಚಕ ದತ್ತಾತ್ರೇಯ ಗ ಬಾಪಟ್ ವಹಿಸಿದ್ದು, ಸುಬ್ರಾಯ ಜೊತೆ ಸಂಪೇಸರ ಸಹಕರಿಸಿದರು. ಈ ವೇಳೆ ಜಾಗೃತ ವೇದಿಕೆಯ ಪದಾಧಿಕಾರಿಗಳು, ಊರ ನಾಗರೀಕರು, ಮುರೇಗಾರ – ಕಡಕಿನ ಬೈಲ್ – ಕಡಬಾಳದ ಬಂಧು – ಭಗಿನಿಯರು ಪಾಲ್ಗೊ೦ಡಿದ್ದರು.