ಶಿರಸಿ: ಕಳೆದೆರಡು ವರ್ಷಗಳಿಂದ ಶಿರಸಿ ಸಹಾಯಕ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ದೇವರಾಜ್ ಆರ್. ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ದೇವರಾಜ್ ಆರ್. ಅವರನ್ನು ಧಾರವಾಡ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಆದೇಶ ಹೊರಡಿಸಿದ್ದು, ಶಿರಸಿಗೆ ಸಹಾಯಕ ಆಯುಕ್ತರಾಗಿ ಐಎಎಸ್ ತೇರ್ಗಡೆಯಾಗಿರುವ ಅಪರ್ಣ ರಮೇಶ ಅವರನ್ನು ನಿಯುಕ್ತಿಗೊಳಿಸಿದೆ.
ಜೊತೆಗೆ ಕಾರವಾರದ ಉಪವಿಭಾಗಕ್ಕೆ ಸಹಾಯಕ ಆಯುಕ್ತರಾಗಿ ಐಎಎಸ್ ಕನಿಷ್ಕ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.