ದಾಂಡೇಲಿ : ಪದವೀಧರ ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆಯ ನೆರವು ನೀಡುವ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ “ಯುವನಿಧಿ” ಯೋಜನೆಯ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಹ ನಿರುದ್ಯೋಗಿ ಯುವ ಜನತೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕೆಂದು ಶಾಸಕರಾದ ಆರ್.ವಿ.ದೇಶಪಾಂಡೆ ಮಂಗಳವಾರ ಮಾಧ್ಯಮದ ಮೂಲಕ ಕರೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದ ನೀಡಿದ ಹೇಳಿಕೆಯಲ್ಲಿ ಆರ್.ವಿ.ದೇಶಪಾಂಡೆ, ಆರ್ಥಿಕ ಸಂಕಷ್ಟದ ನಡುವೆ, ನಿರುದ್ಯೋಗಿ ಯುವಜನರಿಗೆ ಯುವ ನಿಧಿ ಯೋಜನೆಯು ಒಂದು ಆಶಾಕಿರಣವಾಗಿದೆ. ಇದು ಅವರಿಗೆ ಅವರ ಕನಸಿನ ಉದ್ಯೋಗವನ್ನು ಹುಡುಕಲು ಮತ್ತು ಅವರ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಅವರು ಸಂಬಂಧಿಸಿದ ದಾಖಲಾತಿಗಳೊಂದಿಗೆ ಹೆಸರನ್ನು ಈ ಯೋಜನೆಗೆ ನೊಂದಾಯಿಸಿಕೊಳ್ಳುವ ಮೂಲಕ ಯುವನಿಧಿ ಯೋಜನೆಯ ಸದುಪಯೋಗವನ್ನು ಪಡೆಯಬೇಕೆಂದು ಕರೆ ನೀಡಿದರು.