ಹೊನ್ನಾವರ: ಕ್ರೀಡಾಪಟು ಯೋಧನೂ ಆಗಬಹುದು, ಯೋಗಿಯೂ ಆಗಬಹುದು.ಕ್ರೀಡೆಯು ಏಕಾಗ್ರತೆ, ಆರೋಗ್ಯ ಹಾಗೂ ಆಯುಷ್ಯವನ್ನು ಹೆಚ್ಚಿಸುತ್ತದೆ ಎಂದು ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನಾಗಪತಿ ಭಟ್ ನುಡಿದರು.
ಇವರು ಕವಲಕ್ಕಿಯ ಶೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷರಾದ ಐ. ವಿ. ನಾಯ್ಕರವರು ಮಾತನಾಡಿ ಕ್ರೀಡೆ ಕ್ರಿಯಾಶೀಲರನ್ನಾಗಿಸುತ್ತದೆ, ವಿದ್ಯಾರ್ಥಿಗಳಲ್ಲಿ ಶಿಸ್ತು,ಸಂಯಮ ಮತ್ತು ಉತ್ತಮವಾದ ಗುರಿ ಇದ್ದರೆ ಜೀವನವು ಯಶಸ್ವಿಯಾಗುತ್ತದೆ ಎಂದು ನುಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಉಮೇಶ ಹೆಗಡೆ ಮಾತನಾಡಿ ಉತ್ತಮವಾದ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಅತ್ಯಗತ್ಯ ಎಂದರು. ಗೌರವಾಧ್ಯಕ್ಷರಾದ ವಿ.ಜಿ. ಹೆಗಡೆ ಗುಡ್ಗೆಯವರು ಮಾತನಾಡಿ ಸೋಲು ಗೆಲುವಿನ ಮೆಟ್ಟಿಲು, ಸರ್ವತೋಮುಖ ಪ್ರಗತಿಗೆ ಕ್ರೀಡೆ ಅವಶ್ಯಕ ಎಂದರು. ಆಡಳಿತಾಧಿಕಾರಿ ಎಂ.ಎಸ್. ಹೆಗಡೆ ಗುಣವಂತೆಯವರು ಸ್ವಾಗತಿಸಿದರು.ಶಿಕ್ಷಕಿ ವನಿತಾ ಪಿಂಟೊ ವಂದಿಸಿದರು. ಕೀರ್ತಿ ನಾಯ್ಕ ನಿರೂಪಿಸಿದರು. ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಉಮ್ಮಸ್ಸಿನಿಂದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪಾಲಕರ ಹಾಗೂ ನಾಗರೀಕರ ಪ್ರೋತ್ಸಾಹವು ಗಮನ ಸೆಳೆದಿತ್ತು. ಇದೇ ದಿನದಂದು “ಗೀತ ಜಯಂತಿ”ಯನ್ನೂ ಆಚರಿಸಲಾಯಿತು.