ಕಾರವಾರ : ತಾಲೂಕಿನ ನಗೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೈಗಾ ಯೋಜನೆಯ ಹಿರಿಯ ಸ್ಥಾನಿಯ ನಿರ್ದೇಶಕರಾದ ಪಿ.ಜಿ. ರಾಯಚೂರು ಹಾಗೂ ಸಿಎಸ್ಆರ್ ಕಮೀಟಿಯ ಉಪಾಧ್ಯಕ್ಷರು ಹಾಗೂ ಎಡಿಶನಲ್ ಚೀಪ್ ಇಂಜಿನೀಯರ್ ಎಸ್.ತಿಪ್ಪೆಸ್ವಾಮಿ, ಸಿಎಸ್ಆರ್ ಸಮಿತಿಯ ಸಾಯಿನಾಥ ನಾಯ್ಕ, ದಿನೇಶ ಗಾಂವಕರ, ಚಂದನ ನಾಯ್ಕ ಹಾಗೂ ಕಾಶಿನಾಥ ಖಡೆ ಆಗಮಿಸಿ ಸಿಎಸ್ಆರ್ ಯೋಜನೆಯಲ್ಲಿ 2023-24ನೇ ಸಾಲಿನಲ್ಲಿ ಮಂಜೂರಾದ ಮಕ್ಕಳು ಕುಳಿತುಕೊಳ್ಳುವ ಡೆಸ್ಕು, ಟೇಬಲ್ ಖುರ್ಚಿ ಹಾಗೂ ನಲಿಕಲಿ ಮಕ್ಕಳಿಗೆ ರೌಂಡ್ ಟೇಬಲ್ ಹಾಗೂ ಪುಟಾಣಿ ಮಕ್ಕಳ ಖುರ್ಚಿಗಳು ವಿತರಿಸುವ ತಾಲೂಕು ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಅಖ್ತರ್ ಜೆ. ಸಯ್ಯದ್, ಸಹಶಿಕ್ಷಕಿ ರೂಪಾ ಉಮೇಶ ನಾಯ್ಕ, ಕೈಗಾ ಯೋಜನೆಯ ಅತಿಥಿ ಶಿಕ್ಷಕಿ ರೇಣುಕಾ ಆರ್. ಸಾತುಮನೆ, ಎಸ್ಡಿಎಂಸಿ ಅಧ್ಯಕ್ಷ ಲಲಿತಾ ಡಿ. ಗೌಡ, ಉಪಾಧ್ಯಕ್ಷೆ ಲಕ್ಷ್ಮಿ ಜಿ. ಗೌಡ, ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ.ಗಳಾದ ಸಚಿನ ನಾಯ್ಕ ನೈತಿಸಾವರ, ಲಾಲ್ಸಾಬ್ ನಗೆ-ಕೋವೆ, ಸಾಯಿ ಸತ್ವನಿಕೇತನದ ಅಧ್ಯಕ್ಷ ಗಿರೀಶ ಎಚ್.ಎಸ್., ಮುಖ್ಯಾಧ್ಯಾಪಕ ಅಶೋಕ ಗಾಂವಕರ, ಅಡುಗೆ ಸಿಬ್ಬಂದಿಗಳಾದ ಶೋಭಾ ಗೌಡ ಹಾಗೂ ಕಾಂಚನಾ ಗೌಡ, ಶಾಲೆಯ ಸೌಲಭ್ಯಗಳನ್ನು ಬಳಸಿಕೊಳ್ಳುವ ಬಾಲಕ-ಬಾಲಕಿಯರು ಉಪಸ್ಥಿತರಿದ್ದರು.
ಡೆಸ್ಕು, ಬೆಂಚು, ರೌಂಡ್ ಟೇಬಲ್, ಟೇಬಲ್ ಖುರ್ಚಿ ಮುಖ್ಯಾಧ್ಯಾಪಕರಿಗೆ ಹಸ್ತಾಂತರ ಮಾಡಿದ ಕೈಗಾ ಯೋಜನೆಯ ಸ್ಥಳ ನಿರ್ದೇಶಕರಾದ ಪಿ.ಜಿ. ರಾಯಚೂರು ಅವರು ಮಾತನಾಡುತ್ತ ಈ ಗ್ರಾಮೀಣ ಶಾಲೆಗೆ ನಾನು ಆಗಮಿಸಿದ್ದು, ತುಂಬಾ ಖುಷಿ ತಂದಿದೆ. ಇಲ್ಲಿಯ ಪುಟಾಣಿ ಮಕ್ಕಳು ಪರಿಸರ ಜಾಗೃತಿ ಮೂಡಿಸಲು ಶಾಲಾ ವನದಲ್ಲಿ ವೈಯಕ್ತಿಕ ಒಂದೊಂದು ಹೂ ಕುಂಡವನ್ನು ತಮ್ಮ ಹೆಸರಿನಲ್ಲಿ ಬೆಳೆಸಿ ಪೋಷಿಸುತ್ತಿರುವುದು ಆನಂದಕರ ಸಂಗತಿ. ಇನ್ನು ಅನೇಕ ಸಲ ನಾನು ಈ ಶಾಲೆಗೆ ಭೇಟಿ ನೀಡುತ್ತೇನೆ. ಮತ್ತು ಮಕ್ಕಳ ಪರಿಸರ ಪ್ರಜ್ಞೆಯನ್ನು ಇತರ ಅಧಿಕಾರಿಗಳಿಗೆ ತಿಳಿಸಿ ನೀವುಗಳು ಈ ಕಾರ್ಯಕ್ರಮಕ್ಕೆ ಪ್ರೇರಣೆ ನೀಡುವಂತೆ ಮನವಿ ಮಾಡುತ್ತೇನೆ ಎಂದರು. ಸಿಎಸ್ಆರ್ ಯೋಜನೆಯ ಉಪಾಧ್ಯಕ್ಷರು ಹಾಗೂ ಕೈಗಾ ಯೋಜನೆ ಚೀಪ್ ಎಡಿಶನಲ್ ಇಂಜಿನಿಯರ್ ಮಾತನಾಡುತ್ತ ಇದು ಮರೆಯಲಾರದ ಕ್ಷಣ ನಾನು ಈ ಶಾಲೆಗೆ ಆಗಮಿಸಿದ್ದು, ನನಗೆ ಖುಷಿ ತಂದಿದೆ.
ಸಿಎಸ್ಆರ್ ಯೋಜನೆಯ ಯೋಜನೆಗಳನ್ನು ನಗೆ ಗ್ರಾಮದಲ್ಲಿ ಅಳವಡಿಸಲು ಮತ್ತು ಕಾರ್ಯರೂಪಕ್ಕೆ ತರಲು ನಮ್ಮ ಪ್ರಯತ್ನ ನಿಮ್ಮೊಂದಿಗಿದೆ ಎಂದರು. ಮುಖ್ಯಾಧ್ಯಾಪಕ ಅಖ್ತರ ಸೈಯದ್ ಅವರು ತಾಲೂಕು ಮಟ್ಟದ ಸಿಎಸ್ಆರ್ ಯೋಜನೆಯ ಡೆಸ್ಕು, ಬೆಂಚು, ರೌಂಡ್ ಟೇಬಲ್, ಟೇಬಲ್ ಖುರ್ಚಿ ವಿತರಣೆ ಕಾರ್ಯಕ್ರಮ ನಮ್ಮ ಶಾಲೆಯಲ್ಲಿ ಉದ್ಘಾಟಿಸಿದ್ದು, ನಮ್ಮ ಹೆಮ್ಮೆ. ನಮ್ಮ ಮಕ್ಕಳ ಶಿಕ್ಷಣಕ್ಕೆ ಸಹಕರಿಸಿದ್ದಕ್ಕಾಗಿ ಧನ್ಯವಾದಗಳು ಎಂದರು. ಎಸ್ಡಿಎಂಸಿ ಅಧ್ಯಕ್ಷೆ ಲಲಿತಾ ಡಿ. ಗೌಡ, ಉಪಾಧ್ಯಕ್ಷೆ ಲಕ್ಷ್ಮಿ ಜಿ. ಗೌಡ ಹಾಗೂ ಶಿಕ್ಷಕ ವೃಂದ ಕೈಗಾ ಯೋಜನಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಪುಟ್ಟ ಶಾಲಾ ಬಾಲಕ-ಬಾಲಕಿಯರು ಪಿ.ಜಿ. ರಾಯಚೂರು ಹಾಗೂ ಎಸ್.ತಿಪ್ಪೆಸ್ವಾಮಿಯವರಿಗೆ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.