ಕಾರವಾರ: ಹರಿಕಂತ್ರ ಸಮಾಜದ ನೂತನ ಸಂಘ ಜಿಲ್ಲೆಯಲ್ಲಿ ಸಮಾಜದ ಎಲ್ಲರನ್ನು ಒಗ್ಗೂಡಿಸಿ ತೆಗೆದುಕೊಂಡು ಹೋಗುವ ಕೆಲಸ ಮಾಡಲಿದೆ ಎಂದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ದಿಲೀಪ ಅರ್ಗೇಕರ್ ಹೇಳಿದರು.
ನಗರದ ಸಾಗರ ದರ್ಶನ ಸಭಾಂಗಣದಲ್ಲಿ ನಡೆದ ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ನೂತನ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಮೀನುಗಾರಿಗೆ ಏನೇ ಸಮಸ್ಯೆಯಾದರೂ ಸಂಘಟನೆ ಧ್ವನಿಯಾಗಲಿದೆ. ಸಮುದಾಯದ ಎಲ್ಲರಿಗೂ ಸಮಾನ ಗೌರವ ಕೊಡಲಾಗುತ್ತದೆ. ನೌಕರರ ಘಟಕವನ್ನ ಸಹ ನೂತನವಾಗಿ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.
ಮೀನುಗಾರರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹರಿಹರ ಹರಿಕಂತ್ರ ಮಾತನಾಡಿ, ಸಮಾಜದ ಸಮಾನ ಮನಸ್ಕರು ಸೇರಿ ನೂತನ ಸಂಘ ಸ್ಥಾಪಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಮಾನ ಮನಸ್ಕರು ನಿಸ್ವಾರ್ಥ ಸೇವೆಯಿಂದ ದುಡಿದರೆ ಸಂಘಟನೆ ಯಶಸ್ವಿ ಆಗಲು ಸಾಧ್ಯ ಎಂದರು.
ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸಮುದಾಯದವರಿಗೆ ಪ್ರತಿಭಾ ಪ್ರೋತ್ಸಾಹ ಮಾಡಲಾಯಿತು. ಪತ್ರಕರ್ತ ವಿದ್ಯಾದರ ಮೊರಬ, ರೋಷನ್ ಹರಿಕಂತ್ರ, ಮಿಥುನ್ ತಾಂಡೇಲ, ಮಾರುತಿ ಹರಿಕಂತ್ರ, ಕೃಷ್ಣ ತಾಂಡೇಲ, ಕೆ.ಆರ್ ರಮೇಶ, ಸುಶಿಲಾ ಹರಿಕಂತ್ರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.